ಹೆಚ್‌‌ಟಿಸಿ ಬಿಡುಗಡೆ ಮಾಡಿದೆ ಡಿಜೈರ್ ಸೀರಿಜ್‌ನ ಎರಡು ಸ್ಮಾರ್ಟ್‌‌‌‌ಫೊನ್

ಮಂಗಳವಾರ, 22 ಏಪ್ರಿಲ್ 2014 (15:55 IST)
ಹೆಚ್‌‌ಟಿಸಿ ಭಾರತದಲ್ಲಿ ಎರಡು ಸ್ಮಾಟ್‌‌‌ಫೊನ್‌ಗಳಾದ ಡಿಜೈರ್ ಡ್ಯುವೆಲ್ ಸಿಮ್‌‌ನ 210 ಮತ್ತು ಡಿಜೈರ್‌‌ 816 ಬಿಡುಗಡೆ ಮಾಡಿದೆ. ಇದರ ಹೊರತು ಕಂಪೆನಿ ತನ್ನ  ಹೆಚ್‌‌ಟಿಸಿ ಒನ್‌‌‌‌ (ಎಮ್‌8) ಕೂಡ ಭಾರತಲ್ಲಿ ಬಿಡುಗಡೆ ಮಾಡುವ ಘೋಷಣೆ ಮಾಡಿದೆ. 
 
ಎಚ್‌‌ಟಿಸಿ ಡಿಜೈರ್‌ 210 ಡ್ಯುವೆಲ್‌‌‌ ಫೋನ್‌ ಆಂಡ್ರೈಡ್‌ 4.2 ಜೆಲಿ ಬಿನ್‌ ಆಧಾರಿತವಾಗಿದೆ. ಇದರ ಸ್ಕ್ರೀನ್‌ 4 ಇಂಚಿನದ್ದಾಗಿದೆ ಮತ್ತು ಇದರ ರೆಜ್ಯೂಲ್ಯೂಶನ್ 480X800 ಪಿಕ್ಸಲ್‌‌‌‌ ಇದೆ. ಈ ಡ್ಯುವೆಲ್‌ ಸಿಮ್‌ ಫೋನ್‌‌ನಲ್ಲಿ ಎರಡು ಜಿಎಸ್‌‌‌‌‌ಎಮ್‌‌ ಅಳವಡಿಸಲಾಗಿದೆ.  ಇದರ ಬೆಲೆ ಕೇವಲ 8,700 ರೂಪಾಯಿ ಮಾತ್ರ.  ಇದರಲ್ಲಿ 5 ಎಮ್‌‌ಪಿ ಕ್ಯಾಮೆರಾ ಮತ್ತು ಎದುರುಗಡೆ 0.5 ಎಮ್‌‌ಪಿ ಕ್ಯಾಮೆರಾ ಇದೆ. ಇದರಲ್ಲಿ 4 ಜಿಬಿ ಇಂಟರ್‌‌ನಲ್ಲ ಸ್ಟೋರೇಜ್‌‌ ಇದೆ ಮತ್ತು 32 ಜಿಬಿವರೇಗಿನ ಮೆಮೊರಿ ಕಾರ್ಡ್‌‌ ಅಳವಡಿಸಬಹುದಾಗಿದೆ. ಇದರಲ್ಲಿ ವೈ ಫೈ್ , ಬ್ಲ್ಯೂಟೂಥ್‌ , ಜಿಪಿಎಸ್‌‌‌ , ಎಜ್‌‌‌‌/ಜಿಆರ್‌‌ಪಿಎಸ್‌‌ ಮತ್ತು 3 ಜಿ ನಂತಹ ಫಿಚರ್ಸ್‌ಗಳಿವೆ, ಇದರ ಬ್ಯಾಟರಿ 13000 ಎಮ್‌‌ಎಎಚ್‌‌‌ ಇದೆ. 
 
ಹೆಚ್‌‌‌‌ಟಿಸಿ ಡಿಜೈರ್‌‌ 816ನ ಬೆಲೆ ಕೇವಲ 23,990 ರೂಪಾಯಿ ಮಾತ್ರ. ಇದರಲ್ಲಿ 1.5 ಜಿಬಿ ರ್ಯಾಮ್‌‌‌ ಮತ್ತು ಇದರ ಸ್ಕ್ರೀನ್‌‌‌ 5.5 ಇಂಚಿನದ್ದಾಗಿದೆ ಹಾಗು ಇದೊಂದು ಹೆಚ್‌‌ಡಿ ಸ್ಕ್ರೀನ್‌‌ ಆಗಿದೆ. ಈ ಸ್ಮಾರ್ಟ್‌‌ಫೊನ್‌ 1.6 ಜಿಎಚ್‌‌‌‌‌ಜೆಡ್‌‌‌ ಕ್ವಾಡ್‌‌ಕೊರ ಸ್ನೈಪಡ್ರೆಗನ್‌ 400 ಪ್ರೊಸೆಸರ್‌‌‌‌‌ ಮೂಲಕ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 8 ಜಿಬಿ ಇನ್‌‌ಬಿಲ್ಟ್‌‌ ಸ್ಟೋರೆಜ ಇದೆ. ಇದರ ಹೊರತು ಇದರಲ್ಲಿ 128 ಜಿಬಿವರೇಗಿನ ಮೆಮೊರಿ ಕಾರ್ಡ್‌ ಅಳವಡಿಸ ಬಹುದಾಗಿದೆ. ಈ ಸ್ಮಾಟ್‌‌‌ಫೋನ್‌‌‌ನಲ್ಲಿ 13 ಎಮ್‌‌ಪಿ ಕ್ಯಾಮೆರಾ ಇದೆ ಮತ್ತು ಎದುರುಗಡೆ ಕೂಡ 5 ಎಮ್‌ಪಿ ಕ್ಯಾಮೆರಾ ಇದೆ. 

ವೆಬ್ದುನಿಯಾವನ್ನು ಓದಿ