ದೇಶದಲ್ಲಿ ಐದು ಸಾವಿರ ಉದ್ಯೋಗಿಗಳ ವಜಾಕ್ಕೆ ಐಬಿಎಂ ನಿರ್ಧಾರ

ಬುಧವಾರ, 28 ಜನವರಿ 2015 (15:52 IST)
ಆದಾಯ ಕಡಿಮೆ ಖರ್ಚು ಹೆಚ್ಚಳದಿಂದ ಕಂಗಾಲಾಗಿರುವ ಜಾಗತಿಕ ಮಟ್ಟದ ಐಬಿಎಂ ಕಂಪೆನಿ, ಭಾರತದಲ್ಲಿ 5 ಸಾವಿರ ಉದ್ಯೋಗಿಗಳಿಗೆ ಕೊಕ್ ನೀಡಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
 
ನಂಬಲರ್ಹ ಮೂಲಗಳ ಪ್ರಕಾರ, ಕಂಪೆನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳು ಮತ್ತು ಖಾಯಂ ಉದ್ಯೋಗಿಗಳಲ್ಲಿ ಸುಮಾರು 5 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ಕಂಪೆನಿ ನಿರ್ಧರಿಸಿದೆ. 
 
ಜಾಗತಿಕ ಮಾರುಕಟ್ಟೆ ತೊಳಲಾಟದಲ್ಲಿರುವುದರಿಂದ ಆದಾಯ ಕೊರತೆಯನ್ನು ನೀಗಿಸಲು ಉದ್ಯೋಗಿಗಳ ವಜಾ ಅನಿವಾರ್ಯ ಎನ್ನುವುದು ಕಂಪೆನಿಯ ವಾದವಾಗಿದೆ.
 
ಐಬಿಎಂ ಕಂಪೆನಿ ಪ್ರೊಜೆಕ್ಟ್ ಕ್ರೋಮ್ ಎನ್ನುವ ಹೆಸರಲ್ಲಿ ಜಾಗತಿಕ ಮಟದಲ್ಲಿ ಒಟ್ಟು 1.12 ಲಕ್ಷ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಇದರಿಂದ ಕಂಪೆನಿಗೆ 600 ಮಿಲಿಯನ್ ಡಾಲರ್ ಉಳಿತಾಯವಾಗಲಿದೆ. ಭಾರತದಲ್ಲಿ ಐದು ಸಾವಿರ ಉದ್ಯೋಗಿಗಳ ಉದ್ಯೋಗಕ್ಕೆ ಸಂಚಕಾರ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ