ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌ ಸೌಲಭ್ಯ ಇಲ್ಲದವರಿಗೂ ಮುಂಗಡ ರೈಲು ಟಿಕೆಟ್ ಕಾದಿರಿಸುವ ಸೌಲಭ್ಯ

ಸೋಮವಾರ, 1 ಸೆಪ್ಟಂಬರ್ 2014 (13:37 IST)
ಇನ್ನು ಮುಂದೆ ಇಂಟರ್‌ನೆಟ್‌ ಬ್ಯಾಂಕಿಂಗ್‌, ಡೆಬಿಟ್‌ ಕಾರ್ಡ್‌ ಸೌಲಭ್ಯ ಇಲ್ಲದವರೂ ಅಂತರ್ಜಾಲದಲ್ಲಿ ತಮ್ಮ ರೈಲ್ವೆ ಮುಂಗಡ ಟಿಕೆಟ್‌ ಕಾಯ್ದಿರಿಸುವ ಸೌಲಭ್ಯ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಅಲ್ಲದೆ, ಬುಕ್‌ ಮಾಡಿದ ಟಿಕೆಟ್‌ ನಿಮ್ಮ ಮನೆ ಬಾಗಿಲಿಗೇ ಬರಲಿದ್ದು, ಆನಂತರ ಹಣ ನೀಡಿದರೆ ಸಾಕು. 
 
ಐಆರ್‌ಸಿಟಿಸಿ ನೊಯ್ಡಾ ಮೂಲದ ಅಂದುರಿಲ್‌ ತಂತ್ರಜ್ಞಾನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅದು ತನ್ನದೇ ಆದ ಟಿಕೆಟ್‌ ಬುಕಿಂಗ್‌ ವೆಬ್‌ಸೈಟ್‌ ಅನ್ನು ಶೀಘ್ರವೇ ಆರಂಭಿಸಲಿದೆ. ಇದರಲ್ಲಿ ಪ್ರಯಾಣಿಕರು ಟಿಕೆಟ್‌ ಬುಕ್‌ ಮಾಡಬಹುದಾಗಿದ್ದು, ಅದನ್ನು ಮನೆಗೆ ತಲುಪಿಸಿದ ಬಳಿಕ ಹಣ ನೀಡಬಹುದಾಗಿದೆ. 
 
100ಕ್ಕೂ ಹೆಚ್ಚು ನಗರಗಳಲ್ಲಿ ಈ ಸೇವೆ ಲಭ್ಯವಿದೆ. ಆದರೆ, ಸಾಮಾನ್ಯ ರೈಲಿನ ಟಿಕೆಟಿಗೆ 40 ರೂ. ಮತ್ತು ಎಸಿ ರೈಲಿನ ಮುಂಗಡ ಟಿಕೆಟ್‌ಗೆ 60 ರೂ. ಸೇವಾ ಶುಲ್ಕವನ್ನು ಕಂಪನಿ ವಿಧಿಸಲಿದೆ.
 

ವೆಬ್ದುನಿಯಾವನ್ನು ಓದಿ