2022ರವರೆಗೆ ರೈಲಿನಲ್ಲಿರಲಿವೆ ಜೈವಿಕ-ಶೌಚಾಲಯಗಳು

ಮಂಗಳವಾರ, 22 ಜುಲೈ 2014 (10:56 IST)
ಪ್ರಯಾಣಿಕರ ಸ್ವಚ್ಛತೆಗಾಗಿ ಮತ್ತು ಪರಿಸರ ಸ್ನೇಹಿ ಪ್ರಯಾಣ ಮಾಡುವ ಸಲುವಾಗಿ 2021-22ರವರೆಗೆ ಸದ್ಯಕ್ಕೆ ಇದ್ದ ಶೌಚಾಲಯ ( ಡೈರೆಕ್ಟ್‌ ಡಿಸ್ಚಾರ್ಜ್ ಟೈಪ್‌‌‌ ಟಾಯಲೆಟ್‌‌) ಸ್ಥಾನದಲ್ಲಿ ಜೈವಿಕ ಶೌಚಾಲಯ ನಿರ್ಮಿಸುವ ಯೋಜನೆ ಕೇಂದ್ರ ಸರ್ಕಾರ ಮಾಡಿದೆ. 
 
2021-22 ರವರೆಗೆ ಎಲ್ಲಾ ಶೌಚಾಲಯಗಳನ್ನು ತಗೆಯುವ ಯೋಜನೆ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಮಾನವ ಅಧಿಕಾರ ಆಯೋಗದ ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ.  ರೈಲು ಹಳಿಗಳ ಮೇಲೆ ಮಾನವನ ಮಲ ಬೀಳುವ ಗಂಭೀರ ಸಮಸ್ಯೆ ಎದುರಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ಆಯೋಗದಕ್ಕೆ ಭರವಸೆ ನೀಡಿದೆ. 
  
ಈಗ ರೈಲುಗಳಿಂದ ಹಳಿಗಳ ಮೇಲೆ ಬೀಳುವ ಮಾನವನ ಮಲದಿಂದ ಗಂಭೀರ ಸ್ವರೂಪದ ಪರಿಸರದ ಮೇಲೆ ಕೆಟ್ಟ ಪರಿಣಾವ ಬೀರುತ್ತಿದೆ. ಹಳಿಗಳ ಮೇಲೆ ಬೀಳುವ ಮಾನವನ ಮಲದ ಸಮಸ್ಯೆ ಬಗೆಹರಿಸಲು ರೈಲು ಇಲಾಖೆ ಪ್ರತಿ ವರ್ಷ 350 ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ ಎಂದು ರೈಲು ಇಲಾಖೆಯ ವರಿಷ್ಠ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ