ಸ್ವಚ್ಛ ಭಾರತ್ ಯೋಜನೆಗೆ ಸೆಸ್: ಸೇವಾ ತೆರಿಗೆ ಶೇ.16ಕ್ಕೇರಲಿದೆಯೇ?

ಸೋಮವಾರ, 2 ಮಾರ್ಚ್ 2015 (13:44 IST)
ಪೂರ್ಣ ವರ್ಷಾವಧಿಯ ಬಜೆಟ್‌ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸೇವಾ ತೆರಿಗೆಯನ್ನು ಶೇ. 12.36ರಿಂದ ಶೇ. 14ಕ್ಕೆ ಹೆಚ್ಚಿಸುವ ಮೂಲಕ ಅನೇಕ ಬಿಲ್‌ಗಳು ಹೆಚ್ಚಾಗಲಿವೆ.  ಹೊಟೆಲ್‌ನಲ್ಲಿ ಭೋಜನ, ವಿಮಾನ ಪ್ರಯಾಣ ದುಬಾರಿಯಾಗುವುದನ್ನು ಅನೇಕ ಮಂದಿ ಅರಗಿಸಿಕೊಳ್ಳುವ ಮುನ್ನವೇ ಇನ್ನಷ್ಟು ಕೆಟ್ಟ ಸುದ್ದಿಗಳು ಕಾದಿವೆ. ಸೇವಾ ತೆರಿಗೆಯ ದರ ಶೇ. 16ನ್ನು ಮುಟ್ಟಬಹುದೆಂದು ಹೇಳಲಾಗುತ್ತಿದೆ.

ಬಜೆಟ್‌ನಲ್ಲಿ ಸ್ವಚ್ಛ ಭಾರತ್ ಯೋಜನೆಗಾಗಿ ಎಲ್ಲಾ ಸೇವೆಗಳ ಮೇಲೆ ಶೇ. 2ರಷ್ಟು ತೆರಿಗೆ ಹೇರುವುದಕ್ಕೆ ಅವಕಾಶ ನೀಡಲು ಜೇಟ್ಲಿ ಪ್ರಸ್ತಾಪಿಸಿದ್ದಾರೆ. ಈ ಸೆಸ್‌ನಿಂದ ಸಂಗ್ರಹಿಸಿದ ಹಣವನ್ನು ಸ್ವಚ್ಛ ಭಾರತ್ ಯೋಜನೆ ಹೂಡಿಕೆಗೆ ಬಳಸಲಾಗುತ್ತದೆ.ಸ್ವಚ್ಛ ಭಾರತ್ ಸೆಸ್ ಬಗ್ಗೆ ಇನ್ನೂ ಅಸ್ಪಷ್ಟತೆ ಮೂಡಿದ್ದು, ಈ ಕುರಿತು ಅಧಿಸೂಚನೆ ಇನ್ನೊಂದು ವಾರದಲ್ಲಿ ಬರಲಿದೆ ಎಂದು ತೆರಿಗೆ ತಜ್ಞರು ಹೇಳಿದ್ದಾರೆ.  

2015ರ ಏಪ್ರಿಲ್ 1ರಿಂದ  ಚಲನಚಿತ್ರ ದರಗಳು, ಹೊಟೆಲ್ ವಾಸ್ತವ್ಯ, ಜಿಮ್ ಸದಸ್ಯತ್ವ, ಕ್ಲಬ್ ಸದಸ್ಯತ್ವ, ಸೆಲೂನ್‌ಗಳು, ರೇಡಿಯಾ ಕ್ಯಾಬ್ ಪ್ರಯಾಣ ಎಲ್ಲವೂ ದುಬಾರಿಯಾಗಲಿದೆ. ಮನೆ ಖರೀದಿ ವಹಿವಾಟಿನಲ್ಲೂ ಕೂಡ ಸೇವಾ ತೆರಿಗೆ ಹೆಚ್ಚಳ ಪರಿಣಾಮ ಬೀರಲಿದೆ.

ವೆಬ್ದುನಿಯಾವನ್ನು ಓದಿ