ವಿಮಾ ಕ್ಷೇತ್ರದಲ್ಲಿ 3 ತಿಂಗಳಿನಲ್ಲಿ 1186 ಕೋಟಿ ರೂ. ವಿದೇಶಿ ಬಂಡವಾಳ

ಶುಕ್ರವಾರ, 31 ಜುಲೈ 2015 (20:04 IST)
ಈ ವರ್ಷದ ಮಾರ್ಚ್‌ನಿಂದ ಮೇ ತಿಂಗಳಿನವರೆಗೆ ಭಾರತ 184.97 ದಶಲಕ್ಷ ಡಾಲರ್(1186 ಕೋಟಿ ರೂ.) ವಿದೇಶಿ ನೇರ ಹೂಡಿಕೆಯನ್ನು ವಿಮಾ ಕ್ಷೇತ್ರದಲ್ಲಿ ಸ್ವೀಕರಿಸಿದೆ ಎಂದು ಸಂಸತ್ತಿಗೆ ಶುಕ್ರವಾರ ಮಾಹಿತಿ ನೀಡಲಾಯಿತು.
 
ಕಳೆದ ವರ್ಷ ಇದೇ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆ ಹರಿವು 47. 14 ದಶಲಕ್ಷ ಡಾಲರ್‌ಗಳಾಗಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 
 
ಏಪ್ರಿಲ್‌ನಲ್ಲಿ ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯ ಮಿತಿಯನ್ನು  ಶೇ. 49ರಷ್ಟು ಹೆಚ್ಚಿಸುವ ಸರ್ಕಾರದ ನಿರ್ಧಾರವನ್ನು ರಿಸರ್ವ್ ಬ್ಯಾಂಕ್ ಪ್ರಕಟಿಸಿತ್ತು. ರ್ಗದರ್ಶಕಗಳ ಪ್ರಕಾರ,   ಶೇ. 26ರಷ್ಟು ಎಫ್‌ಡಿಐ ಸ್ವಯಂಚಾಲಿತ ಮಾರ್ಗದ ಮೂಲಕ ಬರುತ್ತದೆ. ಶೇ. 49ರವರೆಗೆ ಹರಿವಿಗೆ ಸರ್ಕಾರದ ಅನುಮೋದನೆ ಅಗತ್ಯವಿದೆ.ರೈಲ್ವೆ ಮೂಲಸೌಲಭ್ಯದಲ್ಲಿ ಎಫ್‌ಡಿಐ ಒಳಹರಿವಿನ ಅಂಕಿಅಂಶವನ್ನು ಪ್ರತ್ಯೇಕವಾಗಿ ನಿರ್ವಹಿಸಿಲ್ಲ ಎಂದು ಸಚಿವೆ ತಿಳಿಸಿದರು. ಸ್ತಿರಾಸ್ಥಿ ಕುರಿತ ಎಫ್‌ಡಿಐ ನೀತಿಯನ್ನು ಇತ್ತೀಚೆಗೆ ಪರಿಷ್ಕರಿಸಿಲ್ಲ ಎಂದು ಸಚಿವೆ ತಿಳಿಸಿದರು. 

ವೆಬ್ದುನಿಯಾವನ್ನು ಓದಿ