ಭಾರತದ ಅರ್ಥವ್ಯವಸ್ಥೆ 2 ಟ್ರಿಲಿಯನ್ ಡಾಲರ್: ವಿಶ್ವಬ್ಯಾಂಕ್ ವರದಿ

ಶುಕ್ರವಾರ, 3 ಜುಲೈ 2015 (13:30 IST)
ಭಾರತ ಎರಡು ಸಾವಿರ ಶತಕೋಟಿ($2 ಟ್ರಿಲಿಯನ್) ಡಾಲರ್ ಅರ್ಥವ್ಯವಸ್ಥೆಯನ್ನು ದಾಟಿದೆ. ವಿಶ್ವಬ್ಯಾಂಕ್ ವರದಿಯೊಂದರ ಪ್ರಕಾರ, ಭಾರತದ ಜಿಡಿಪಿ 2014ರಲ್ಲಿ 2 ಸಾವಿರ ಶತಕೋಟಿ ಗಡಿಯನ್ನು ದಾಟಿದ್ದು, ಪ್ರಸಕ್ತ 2.067 ಸಾವಿರ ಶತಕೋಟಿ ಅರ್ಥವ್ಯವಸ್ಥೆಯಲ್ಲಿ  ನಿಂತಿದೆ.

ಕೇವಲ ಏಳು ವರ್ಷಗಳಲ್ಲಿ ಭಾರತ ತನ್ನ ಅರ್ಥವ್ಯವಸ್ಥೆಗೆ ಒಂದು ಸಾವಿರ ಶತಕೋಟಿ ಸೇರಿಸಿದೆ. ಆದಾಯಕ್ಕೆ ಸಂಬಂಧಿಸಿದಂತೆ ಭಾರತ ಈಗಲೂ ಕೆಳ ಮಧ್ಯಮ ಆದಾಯ ವರ್ಗದಲ್ಲಿದೆ. 
 
ಪ್ರತಿ ವ್ಯಕ್ತಿಗೆ ಭಾರತದ ಒಟ್ಟು ರಾಷ್ಟ್ರೀಯ ಆದಾಯವು 1610 ಡಾಲರ್. ಇದು ಪ್ರಸಕ್ತ ವಿನಿಮಯ ದರದಲ್ಲಿ 1,01, 430 ರೂ.ಗಳಾಗುತ್ತದೆ. ಭಾರತ ಈ ವರ್ಷ ಅತೀ ವೇಗದ ಅರ್ಥವ್ಯವಸ್ಥೆಗಳಲ್ಲಿ  ಒಂದಾಗಿದೆ.
 
 

ವೆಬ್ದುನಿಯಾವನ್ನು ಓದಿ