ಭಾರತದ ಆರ್ಥಿಕತೆ ಶೇ. 5.5ರಷ್ಟು ಬೆಳವಣಿಗೆ ನಿರೀಕ್ಷೆ

ಶುಕ್ರವಾರ, 19 ಡಿಸೆಂಬರ್ 2014 (13:42 IST)
ಭಾರತದ ಆರ್ಥಿಕತೆ ಈ ಸಾಲಿನ ವಿತ್ತೀಯ ವರ್ಷದಲ್ಲಿ 2015ರ ಮಾರ್ಚ್‌ವರೆಗೆ ಸರಿಸುಮಾರು 5.5ರಷ್ಟು ಬೆಳೆಯುವುದೆಂದು ನಿರೀಕ್ಷಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ ವರದಿಯಲ್ಲಿ ತಿಳಿಸಿದೆ.

ಈ ಮುನ್ಸೂಚನೆ ಫಲಪ್ರದವಾದರೆ, ಎರಡು ಸತತ ವರ್ಷಗಳಲ್ಲಿ ಶೇ. 5ಕ್ಕಿಂತ ಕಡಿಮೆ ಇದ್ದ ಒಟ್ಟು ರಾಷ್ಟ್ರೀಯ ಉತ್ಪನ್ನದ ಬೆಳವಣಿಗೆಯಲ್ಲಿ ಸುಧಾರಣೆಯ ಸಂಕೇತವಾಗಿದೆ.
 
ಈ ಸಾಲಿನ ವಿತ್ತೀಯ ವರ್ಷದ ಮೊದಲ 6ತಿಂಗಳಲ್ಲಿ, ಏಷ್ಯಾದ ಮೂರನೇ ದೊಡ್ಡ ಆರ್ಥಿಕತೆ ಶೇ. 5.5.ರಷ್ಟು ವಾರ್ಷಿಕ ಬೆಳವಣಿಗೆಯಾಗಿದೆ. 2014-15ರಲ್ಲಿ ನಿರೀಕ್ಷಿಸಿದ ಶೇ. 5.5 ಆರ್ಥಿಕ ಬೆಳವಣಿಗೆ ದರವನ್ನು ಸಾಧಿಸುವ ದಿಸೆಯಲ್ಲಿ ಭಾರತವಿದ್ದು, ಕುಸಿಯುತ್ತಿರುವ ತೈಲ ದರಗಳು ಅನೇಕ ಅನುಕೂಲಕರ ಸುಧಾರಣೆಗಳಿಗೆ ಸುವರ್ಣಾವಕಾಶ ಒದಗಿಸಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್  ಕೂಡ  ಗುರುವಾರ ತಿಳಿಸಿದೆ.

ಅಭಿವೃದ್ಧಿ ಶೀಲ ಏಷ್ಯಾದಲ್ಲಿ  2014ರ ದ್ವಿತೀಯಾರ್ಧದಲ್ಲಿ ನಿಧಾನಗತಿಯ ನಡುವೆಯೂ ಬೆಳವಣಿಗೆಯ ದೃಷ್ಟಿಕೋನ ಸ್ಥಿರವಾಗಿದ್ದು, ಕುಸಿಯುತ್ತಿರುವ ತೈಲ ದರಗಳು ಏಷ್ಯಾದಲ್ಲಿ ಅನೇಕ ಫಲಪ್ರದ ಸುಧಾರಣೆಗಳಿಗೆ ಸುವರ್ಣಾವಕಾಶ ಒದಗಿಸಿದೆ ಎಂದು ಅದು ತಿಳಿಸಿದೆ. 
 
 ಭಾರತ ಮತ್ತು ಇಂಡೋನೇಶಿಯಾ ಮುಂತಾದ ತೈಲ ಆಮದು ರಾಷ್ಟ್ರಗಳು ದುಬಾರಿ ಇಂಧನ ಸಬ್ಸಿಡಿ ಕಾರ್ಯಕ್ರಮಗಳ ಸುಧಾರಣೆಗೆ ತೈಲ ಬೆಲೆಗಳ ಕುಸಿತ ನೆರವಾಗುತ್ತದೆ ಎಂದು ಎಡಿಜಿ ಮುಖ್ಯಸ್ಥ ಅರ್ಥಶಾಸ್ತ್ರಜ್ಞ ಶಾಂಗ್ ಜಿನ್ ವೈ ತಿಳಿಸಿದರು.
 

ವೆಬ್ದುನಿಯಾವನ್ನು ಓದಿ