2016ರಲ್ಲಿ ಜಿಡಿಪಿ ದರ ಶೇ.7.8 ಕ್ಕೆ ತಲುಪುವ ನಿರೀಕ್ಷೆ

ಸೋಮವಾರ, 25 ಏಪ್ರಿಲ್ 2016 (16:28 IST)
ಕೇಂದ್ರ ಸರಕಾರದ ಏಳನೇ ವೇತನ ಮತ್ತು ಪ್ರಸಕ್ತ ವರ್ಷದಲ್ಲಿ ಸಾಮಾನ್ಯಕಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿರುವ ಸೂಚನೆಯ ಮೇಲೆ ದೇಶದ ಜಿಡಿಪಿ ಬೆಳವಣಿಗೆ ದರ 7.8 ಪ್ರತಿಶತಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ನೋಮುರ್ ವರದಿಗಳು ತಿಳಿಸುತ್ತಿವೆ.
2015 ರ ಆರ್ಥಿಕ ವರ್ಷದ ಕೊನೆಯಲ್ಲಿ ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ದುರ್ಬಲವಾಗಿತ್ತು. ಆದರೆ ಪ್ರಸಕ್ತ ವರ್ಷದ ಆರಂಭದಲ್ಲಿ ದೇಶದ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.
 
ಕೃಷಿಯೇತರ ಜಿಡಿಪಿ ಬೆಳವಣಿಗೆಯನ್ನು ಮುಂದಿನ ಎರಡು ತ್ರೈಮಾಸಿಕದ ಅವಧಿಯವರೆಗೂ ಕ್ರೋಢೀಕರಿಸುವಂತೆ ಪ್ರಮುಖ ಸೂಚಕಗಳು ಸಲಹೆ ನೀಡಿವೆ. 2015 ರ ಆರ್ಥಿಕ ವರ್ಷದಲ್ಲಿ ಜೆಡಿಪಿ ಬೆಳವಣಿಗೆ ದರ 7.3 ಪ್ರತಿಶತವಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 7.8 ಪ್ರತಿಶತಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ನೋಮುರ್ ಸಂಶೋಧನಾ ವರದಿಗಳು ತಿಳಿಸುತ್ತಿವೆ.

ವೆಬ್ದುನಿಯಾವನ್ನು ಓದಿ