ಮಿಸೈಲ್ ಗುಂಪಿಗೆ ಭಾರತ ಸೇರ್ಪಡೆಯಿಂದ ಚೀನಾ ಕಳವಳ: ತಜ್ಞರು

ಶನಿವಾರ, 2 ಜುಲೈ 2016 (16:28 IST)
ಭಾರತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣದ ಪ್ರಚಲಿತ ಪದ್ಧತಿ (ಎಂಟಿಸಿಆರ್)ನಲ್ಲಿ ಸದಸ್ಯತ್ವ ಪಡೆದುಕೊಂಡಿರುವುದರಿಂದ ಚೀನಾ ದೇಶಕ್ಕೆ ಸವಾಲು ಒಡ್ಡಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ಎಂಟಿಸಿಆರ್ ಗುಂಪಿಗೆ ಸೇರ್ಪಡೆಯಾಗುವುದರಿಂದ ಭಾರತ, ಕಾನೂನುಬದ್ಧವಾಗಿ ಅತ್ಯಾಧುನಿಕ ಕ್ಷಿಪಣಿಗಳನ್ನು ಏಷ್ಯಾದ ರಾಷ್ಟ್ರಗಳಿಗೆ ಮಾರಾಟ ಮಾಡಲು ಅಧಿಕೃತ ಅವಕಾಶ ದೊರೆತಂತಾಗಿದೆ. 
 
ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣದ ಪ್ರಚಲಿತ ಪದ್ಧತಿ (ಎಂಟಿಸಿಆರ್), ಕ್ಷೀಪಣಿಗಳ ಮಾರಾಟ ಪ್ರಕ್ರಿಯೆಯನ್ನು ಕಾನೂನು ಸಮ್ಮತವಾಗಿ ವೇಗಗೊಳಿಸುತ್ತದೆ. ವಿಶೇಷವಾಗಿ ವಿಯೆಟ್ನಾಂ ಬ್ರಹ್ಮೋಸ್ ಕ್ಷೀಪಣಿಯನ್ನು ಖರೀದಿಸಲು ಈಗಾಗಲೇ ಆಸಕ್ತಿ ತೊರಿಸಿದ್ದು, ಹನೋಯಿ ಚೀನಿ ಹಡಗು ಖರೀದಿಸಲು ಹಿಂದೇಟು ಹಾಕುತ್ತಿದೆ ಎಂದು ಸೆಂಟರ್ ಫಾರ್ ಪಾಲಿಸಿ ರಿಸರ್ಚ್ ಪ್ರಾಧ್ಯಾಪಕ ಭಾರತ್ ಕರ್ನಾಡ್ ತಿಳಿಸಿದ್ದಾರೆ.
 
ಒಂದು ವೇಳೆ, ಭಾರತ, ಬ್ರಹ್ಮೋಸ್ ಕ್ಷೀಪಣಿಯನ್ನು ವಿಯೆಟ್ನಾಮ್‌ಗೆ ಹಸ್ತಾಂತರಿಸುವ ಪ್ರಕ್ರಿಯೆಯನ್ನು ವೇಗವಾಗಿ ಮಾಡಿದ್ದಲ್ಲಿ, ಭಾರತೀಯ ಸಮುದ್ರದಲ್ಲಿ ಪ್ರಾಬಲ್ಯ ಹೊಂದಿರುವ ಚೀನಾಗೆ ಬೆದರಿಕೆಯೊಡ್ಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 
 
ಬ್ರಹ್ಮೋಸ್ ಶಬ್ದವೇಗಾತೀತ ಕ್ಷೀಪಣಿಯಾಗಿದ್ದು, ಇದು ತನ್ನನ್ನು ರಕ್ಷಿಸಿಕೊಳ್ಳಲು ಯಾವುದೇ ಹಡಗುಗಳಿಗೆ ಅವಕಾಶ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಗುರಿ ತಪ್ಪುವುದಿಲ್ಲ ಎಂದು ಕಾರ್ನಾಡ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ