ಚೀನಾವನ್ನು ಸೋಲಿಸಿ ಬಾಂಗ್ಲಾದಲ್ಲಿ ವಿದ್ಯುತ್ ಗುತ್ತಿಗೆ ಗಿಟ್ಟಿಸಿದ ಬಿಎಚ್‌ಇಎಲ್

ಮಂಗಳವಾರ, 23 ಫೆಬ್ರವರಿ 2016 (15:41 IST)
ಏಷ್ಯಾ ಉಪಖಂಡದ ಎರಡು ಬಲಾಢ್ಯ ಶಕ್ತಿಗಳ ನಡುವಿನ ವಾಣಿಜ್ಯ ವಹಿವಾಟು ಸ್ವಾಧೀನದ ಪೈಪೋಟಿಯಲ್ಲಿ ಚೀನಾದ ಸ್ಪರ್ಧಿಯನ್ನು ಸೋಲಿಸಿದ ಸರ್ಕಾರಿ ಸ್ವಾಮ್ಯದ ಬಿಎಚ್‌ಇಎಲ್ ಬಾಂಗ್ಲಾದೇಶದಲ್ಲಿ  1.6 ಶತಕೋಟಿ ಮೌಲ್ಯದ ವಿದ್ಯುತ್ ಘಟಕ ನಿರ್ಮಾಣದ ಗುತ್ತಿಗೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಶ್ರೀಲಂಕಾದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡುವಲ್ಲಿ ಚೀನಾ ಯಶಸ್ವಿಯಾದ ಬಳಿಕ ಬಾಂಗ್ಲಾದೇಶದಲ್ಲಿ ಈ ಬೆಳವಣಿಗೆಯು ಭಾರತದ ಅಧಿಕಾರಿಗಳಿಗೆ ಸ್ವಾಗತಾರ್ಹ ಸುದ್ದಿಯಾಗಿದೆ.
 
ತನ್ನ ಹಿತ್ತಲ ಜಾಗ ಎಂದು ಭಾರತ ಪರಿಗಣಿಸಿದ ಪ್ರದೇಶದಲ್ಲೇ ಬೀಜಿಂಗ್ ಅತಿಕ್ರಮಣ ಮಾಡುತ್ತಿರುವುದು ಭಾರತದ ಅಧಿಕಾರಿಗಳನ್ನು ಚಿಂತೆಗೀಡುಮಾಡಿತ್ತು. ಪಾಕಿಸ್ತಾನದ ಗ್ವಾಡಾರ್ ಬಂದರಿನಿಂದ  ಆಫ್ರಿಕಾದ ಜಿಬೌಟಿವರೆಗೆ ಚೀನಾ ನೌಕಾನೆಲೆಯನ್ನು ನಿರ್ಮಿಸುತ್ತಿದ್ದು, ಬಾಂಗ್ಲಾದೇಶವು ಸ್ಟ್ರಿಂಗ್ ಆಫ್ ಪರ್ಸ್ ಭಾಗವೆಂದು ಭಾರತ ನಂಬಿದೆ.

ಅನೇಕ ವರ್ಷಗಳ ಮಾತುಕತೆ ನಂತರ ಬಿಎಚ್ಇಎಲ್ ದಕ್ಷಿಣ ಬಾಂಗ್ಲಾದೇಶದ ಖುಲ್ನಾದಲ್ಲಿ 1320 ಮೆಗಾವಾಟ್ ಉಷ್ಣ ವಿದ್ಯುತ್ ಸ್ಥಾವರವನ್ನು ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ನವದೆಹಲಿ ಮತ್ತು ಢಾಕಾದ ಅಧಿಕಾರಿಗಳು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ