ಓಡಿಸಾದ ಚಾಂಡೀಪುರದಲ್ಲಿ ಯಶಸ್ವಿ ಕ್ಷಿಪಣಿ ಉಡಾವಣೆ

ಗುರುವಾರ, 30 ಜೂನ್ 2016 (13:55 IST)
ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಭೂಮಿಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿಯನ್ನು ಇಂದು ಒಡಿಶಾ ಕರಾವಳಿಯಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತ್ತು.
 
ಮಧ್ಯಮ ಶ್ರೇಣಿಯ ಕ್ಷಿಪಣಿ (ಎಮ್‌ಆರ್‌-ಎಸ್‌ಎಎಮ್), ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿ ಪಡಿಸಿದ್ದು, ಇಂದು ಈ ಕ್ಷಿಪಣಿಯನ್ನು ಚಾಂಡಿಪುರ ಕ್ಷಿಪಣಿ ಪರೀಕ್ಷಾ ಕೇಂದ್ರದಿಂದ ಮುಂಜಾನೆ 8.15 ರ ಸುಮಾರಿಗೆ ಮೊಬೈಲ್ ಲಾಂಚರ್ ಮೂಲಕ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು ಎಂದು ಡಿಆರ್‌ಡಿಓ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
 
ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದ್ದು, ಈ ಕ್ಷಿಪಣಿ ಸುಲಭವಾಗಿ ತನ್ನ ಎಲ್ಲಾ ಗುರಿಗಳನ್ನು ತಲುಪುತ್ತದೆ ಎಂದು ಡಿಆರ್‌ಡಿಓ ಅಧಿಕಾರಿಗಳು ತಿಳಿಸಿದ್ದಾರೆ.
 
ಇದಲ್ಲದೆ ಕ್ಷಿಪಣಿ, ಕಣ್ಗಾವಲು ಬಹುಕಾರ್ಯ, ರೆಡಾರ್ ನೀಡುವ ಎಚ್ಚರಿಕೆ ಕರೆಯ ಪತ್ತೆ ಮಾಡುವಿಕೆ ಮತ್ತು ಕ್ಷಿಪಣಿ ಟ್ರ್ಯಾಕಿಂಗ್ ಮತ್ತು ಮಾರ್ಗದರ್ಶನ ಮಾಡುವ ವೈಶಿಷ್ಟ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
 
ಭೂಮಿಯಿಂದ ಆಕಾಶಕ್ಕೆ ಹಾರುವ ಈ ಕ್ಷಿಪಣಿಯನ್ನು ಹೈದ್ರಾಬಾದ್ ಡಿಆರ್‌ಡಿಓ ಮೂಲದ ಭಾರತೀಯ ರಕ್ಷಣಾ ಸಂಶೋಧನೆ ಅಭಿವೃದ್ಧಿ ಪ್ರಯೋಗಾಲಯ (ಡಿಆರ್‌ಡಿಎಲ್), ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಕ್ಷಿಪಣಿ (ಎಐಎ) ಸಹಯೋಗದೊಂದಲ್ಲಿ ಅಭಿವೃದ್ಧಿ ಪಡಿಸಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ