10-12 ವರ್ಷಗಳಲ್ಲಿ 4-5 ಟ್ರಿಲಿಯನ್ ಡಾಲರ್ ಆರ್ಥಿಕತೆ: ಜಯಂತ್ ಸಿನ್ಹಾ

ಶುಕ್ರವಾರ, 30 ಜನವರಿ 2015 (16:22 IST)
ಭಾರತದ ಆರ್ಥಿಕತೆ ಮುಂದಿನ 10-12 ವರ್ಷಗಳಲ್ಲಿ 4-5 ಟ್ರಿಲಿಯನ್( ಸಾವಿರ ಕೋಟಿ)  ಡಾಲರ್ ಆರ್ಥಿಕತೆಯಾಗಲಿದೆ ಎಂದು ಹಣಕಾಸು ಖಾತೆ ರಾಜ್ಯಸಚಿವ ಜಯಂತ್ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದು, ಭಾರತದಲ್ಲಿ ಹೂಡಿಕೆ ಮಾಡಲು ಇದು ಸಕಾಲ ಎಂದು ಹೇಳಿದ್ದಾರೆ.

ಸಂಪತ್ತು ಸೃಷ್ಟಿಗೆ ಇದಕ್ಕಿಂತ ಉತ್ತಮ ಅವಕಾಶ ಇನ್ನೊಂದಿಲ್ಲ. ನಾವು ಭಾರತದ 2 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು 10-12 ವರ್ಷಗಳಲ್ಲಿ 4-5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಒಯ್ಯುತ್ತೇವೆ ಎಂದು ಸಿನ್ಹಾ ಭಾರತೀಯ ಖಾಸಗಿ ಮತ್ತು ಉದ್ಯಮ ಬಂಡವಾಳ ಒಕ್ಕೂಟ ಆಯೋಜಿಸಿದ್ದ ಸಮಾರಂಭದಲ್ಲಿ ತಿಳಿಸಿದರು.

ಮುಂದಿನ ಬಜೆಟ್‌ನಲ್ಲಿ ತೆರಿಗೆ ವಿಷಯಗಳನ್ನು ಸೂಕ್ತವಾಗಿ ನಿಭಾಯಿಸುವುದಾಗಿಯೂ ಮತ್ತು ಭಾರತ ವಿದೇಶಿ ಹೂಡಿಕೆಯನ್ನು ಸ್ವಾಗತಿಸಲು ಬದ್ಧವಾಗಿದೆ ಎಂದು ವಿದೇಶಿ ಹೂಡಿಕೆದಾರರಿಗೆ ಭರವಸೆ ನೀಡಿದರು.

ಸಿಂಗಪುರ ಮತ್ತು ಲಂಡನ್ ರೀತಿಯಲ್ಲಿ ಭಾರತ ಅಂತಾರಾಷ್ಟ್ರೀಯ ವಾಣಿಜ್ಯ ಕೇಂದ್ರವಾಗಲು ಯಾಕೆ ಸಾಧ್ಯವಿಲ್ಲ. ನಾವು ಮುಂಬೈಯನ್ನು ಅಂತಾರಾಷ್ಟ್ರೀಯ ವಾಣಿಜ್ಯ ಕೇಂದ್ರವಾಗಿಸಲು ಬಯಸುತ್ತೇವೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ