ಮಾರುಕಟ್ಟೆಗೆ ಲಗ್ಗೆ ಇಟ್ಟ ಇಂಡಿಯನ್‌ ಮೋಟಾರ್ ಸೈಕಲ್‌‌‌ನ ಬೈಕ್ಸ್‌‌

ಮಂಗಳವಾರ, 6 ಮೇ 2014 (15:26 IST)
ಇಂಡಿಯನ್‌ ಮೋಟರ್‌ಸೈಕಲ್‌‌ ತನ್ನ ಮೂರು ಹೊಸ ಬೈಕ್‌‌‌‌ಗಳನ್ನು ಬಿಡುಗಡೆ ಮಾಡಿದೆ.
ಅಮೆರಿಕಾದ ಈ ಬೈಕ್ ನಿರ್ಮಾಣದ ಕಂಪೆನಿ ತನ್ನ ಈ ಬೈಕ್‌‌ಗಳನ್ನು ಸಿಬಿಯು(ಕಂಪ್ಲಿಟ್ಲಿ ಬ್ಯೂಲ್ಟ ಯುನಿಟ್‌) ಮೂಲಕ ಬಿಡುಗಡೆ ಮಾಡಿದೆ. ಇದರಿಂದ ನೇರವಾಗಿ ಯುಎಸ್‌ನಿಂದ ಬೈಕ್‌‌ಗಳನ್ನು ಆಯಾತ ಮಾಡಿಕೊಳ್ಳಬಹುದಾಗಿದೆ. 
 
ಇಂಡಿಯನ್ ಚೀಫ್‌ ಕ್ಲಾಸಿಕ್‌‌‌ನ ಮೊದಲ ಬೈಕ್‌‌‌‌ನ ಬೆಲೆ 26.5 ಲಕ್ಷ ರೂಪಾಯಿ ಇದೆ. ಎರಡನೇ ಬೈಕ್‌ ಇಂಡಿಯನ್‌ ಚೀಫ್‌ ವಿಂಟಜ್‌‌‌‌ನ ಬೆಲೆ ಕೇವಲ 29.5 ಲಕ್ಷ ರೂಪಾಯಿಗಳಾಗಿವೆ. ಇವಕ್ಕಿಂತ ಹೆಚ್ಚು ದುಬಾರಿಯಾದ ವಾಹನವೆಂದರೆ ಇಂಡಿಯನ್‌‌‌ ಚಿಫ್ಟೆನ್‌. ಇದರ ಬೆಲೆ 33 ಲಕ್ಷ ರೂಪಾಯಿಗಳು ಮಾತ್ರ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್‌ ಶೋರುಂ ಪ್ರಕಾರ ಇವೆ. 
 
ಇಂಡಿಯನ್‌ ಮೋಟಾರ ಸೈಕಲ್‌‌ನ ಈ ಮೂರು ಬೈಕ್‌ಗಳಲ್ಲಿ 1811 ಸಿಸಿ ಥಂಡರ್‌ಸ್ಟ್ರೋಕ್‌‌‌ 111 ವಿ-ಟ್ವಿನ್ ಇಂಜಿನ ಅಳವಡಿಸಲಾಗಿದೆ. ಇದು 139 ಎನ್‌ಎಮ್‌‌ನ ಟ್ರಾಕ್‌ ನೀಡುತ್ತದೆ.

ವೆಬ್ದುನಿಯಾವನ್ನು ಓದಿ