ವಾಹನ ದಟ್ಟಣೆ, ಪಾರ್ಕಿಂಗ್ ಕೊರತೆ: ಆನ್‌ಲೈನ್ ಶಾಪಿಂಗ್‌ಗೆ ಗ್ರಾಹಕರು ದುಂಬಾಲು

ಗುರುವಾರ, 27 ನವೆಂಬರ್ 2014 (17:36 IST)
ನಗರ ವಾಹನ ದಟ್ಟಣೆ ಮತ್ತು ಪಾರ್ಕಿಂಗ್ ಕೊರತೆಯಿಂದ ಕಂಗಾಲಾಗಿರುವ ಭಾರತೀಯರು ಹೆಚ್ಚೆಚ್ಚು ಆನ್‌ಲೈನ್ ಆಹಾರಪದಾರ್ಥಗಳ ಶಾಪಿಂಗ್ ಪ್ರಕ್ರಿಯೆಗೆ ಜೋತುಬಿದ್ದಿದ್ದಾರೆ. ಸೂಪರ್‌ಮಾರ್ಕೆಟ್‌ಗಳು ತಿಣುಕಾಡುತ್ತಿರುವ ನಡುವೆ, ಬಿಗ್‌ಬಾಸ್ಕೆಟ್ ಮತ್ತು ಲೋಕಲ್ ಬಾನ್ಯಾ ಡಾಟ್  ಕಾಂಗಳು ಲಾಭ ಮಾಡಿಕೊಳ್ಳುತ್ತಿವೆ.

ಆನ್‌ಲೈನ್ ಮಾರಾಟಗಾರರು ದೊಡ್ಡ ನಗರಗಳಲ್ಲಿ ವಾಣಿಜ್ಯ ಬಾಡಿಗೆ ಗಗನಕ್ಕೇರಿರುವುದರಿಂದ ನಗರಗಳ ಹೊರಗೆ ಗೋದಾಮಿನಲ್ಲಿ ದಾಸ್ತಾನುಮಾಡುವುದರಿಂದ ಅನುಕೂಲ ಪಡೆಯುತ್ತಾರೆ. ಬಿಗ್ ಬ್ಯಾಸ್ಕೆಟ್ ಡಾಟ್ ಕಾಂ ಸಾಂಪ್ರದಾಯಿಕ ಸೂಪರ್‌ಮಾರುಕಟ್ಟೆ ದರಗಳಿಗಿಂತ ಹೆಚ್ಚು ದರ ವಿಧಿಸಬಹುದು.

ಇದರ ಅರ್ಥ ಎಲ್ಲ ಆಹಾರ ಚಿಲ್ಲರೆ ಮಾರಾಟಗಾರರು ಅಕ್ಕಿ ಮತ್ತಿತರ ಪದಾರ್ಥಗಳ ಮೇಲೆ ಶೇ. 20ರಷ್ಟು ಲಾಭ ಗಳಿಸುತ್ತಿರುವ ನಡುವೆ ಬಿಗ್ ಬ್ಯಾಸ್ಕೆಟ್ ಮತ್ತಷ್ಟು ಲಾಭ ಪಡೆಯುತ್ತಿದೆ. .ಅಮೆರಿಕದ ವಾಲ್‌ಮಾರ್ಟ್ ಅಥವಾ ಟೆಸ್ಕೋದಲ್ಲಿ ನೀವು ಶಾಪಿಂಗ್ ಮಾಡಬಹುದು.

ಏಕೆಂದರೆ ಅವು ಪಾರ್ಕಿಂಗ್‌ಗೆ ಉತ್ತಮ ಸ್ಥಳಾವಕಾಶ ಹೊಂದಿರುತ್ತದೆ. ನೀವು ನಿಮ್ಮ ಕಾರಿನವರೆಗೆ ಶಾಪಿಂಗ್ ಗಾಡಿಗಳನ್ನು ತರಬಹುದು. ಆದರೆ ಭಾರತದಲ್ಲಿ ಇಂತಹ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ. ಏಷ್ಯಾದ ಆಹಾರ ಪದಾರ್ಥ ಖರೀದಿದಾರರು ದಟ್ಟವಾದ ಜನಸಂಖ್ಯೆಯಿಂದ ಕೂಡಿದ ನಗರಗಳಲ್ಲಿ ಆನ್‌ಲೈನ್ ಮಾರಾಟ ಹೆಚ್ಚು ಆಕರ್ಷಕವಾಗಿರುತ್ತದೆ. 

ವೆಬ್ದುನಿಯಾವನ್ನು ಓದಿ