ಭಾರತೀಯರಿಗೆ ಸೆಕ್ಸ್‌ಗಿಂತಲೂ ಸ್ಮಾರ್ಟ್‌ಫೋನ್ ಇಷ್ಟವಂತೆ: ಸಮೀಕ್ಷೆ

ಬುಧವಾರ, 29 ಜುಲೈ 2015 (19:38 IST)
ದೇಶದಲ್ಲಿರುವ ಬಹುತೇಕ ಯುವಕರು ಸ್ಮಾರ್ಟ್ ಫೋನ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ. ಕೆಲವರಂತೂ ರಾತ್ರಿಯಲ್ಲಿ ಮಲಗುವಾಗ ಕೈಯಲ್ಲಿ ಹಿಡಿದುಕೊಂಡು ಮಲಗುವ ಹವ್ಯಾಸ ಮಾಡಿಕೊಂಡಿದ್ದಾರೆ. ಭಾರತೀಯರು ಸೆಕ್ಸ್‌ಗಿಂತ ಸ್ಮಾರ್ಟ್‌ಫೋನ್‌ಗೆ ಹೆಚ್ಚಿನ ಒತ್ತು ನೀಡುತ್ತಾರೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. 
 
ಸುಮಾರು 7 ಸಾವಿರ ಜನರನ್ನು ಸಂದರ್ಶಿಸಿದಾಗ ಶೇ.60 ರಷ್ಟು ಜನ ಕೈಯಲ್ಲಿ ಹ್ಯಾಂಡ್‌ಸೆಟ್ ಹಿಡಿದುಕೊಂಡು ನಿದ್ರೆಗೆ ಶರಣಾಗುತ್ತಾರೆ. ಬಾರತದಲ್ಲಿ ಶೇ.74 ರಷ್ಟು ಜನ ಮತ್ತು ಚೀನಾದಲ್ಲಿ ಶೇ.70 ರಷ್ಟು ಜನರು ಸ್ಮಾರ್ಟ್‌ಫೋನ್ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ.
 
ಆರು ಮಂದಿ ಸ್ಮಾರ್ಟ್‌ಫೋನ್ ಬಳಕೆದಾರರಲ್ಲಿ ಒಬ್ಬ ಬಳಕೆದಾರರು ಸ್ನಾನ ಮಾಡುವಾಗ ಕೂಡಾ ಸ್ಮಾರ್ಟ್‌ಫೋನ್ ಜತೆಯಲ್ಲಿಡುತ್ತಾರೆ. ಶೇ.40 ರಷ್ಟು ಜನರು ಸ್ಮಾರ್ಟ್‌ಫೋನ್‌ನಲ್ಲಿ ತಮ್ಮ ಜೀವನದ ರಹಸ್ಯವನ್ನು ಬಿಚ್ಚಿಡುತ್ತಾರಂತೆ. 
 
ಆದರೆ, ಸ್ಮಾರ್ಟ್‌ಫೋನ್ ಮತ್ತು ಗ್ರಾಹಕರ ಸಂಬಂಧ ಅಂತಹ ಮಧುರವಾಗಿಲ್ಲ. ಯಾಕೆಂದರೆ ಶೇ. 79 ರಷ್ಟು ಗ್ರಾಹಕರು ಮಹತ್ವದ ಸಂದರ್ಭದಲ್ಲಿ ಫೋನ್ ಕೈಕೊಡುತ್ತದೆ ಎಂದು ಅಸಮಾಧನ ವ್ಯಕ್ತಪಡಿಸಿದ್ದರೆ ಷೇ.39 ರಷ್ಟು ಗ್ರಾಹಕರು ಸ್ಮಾರ್ಟ್‌ಪೋನ್ ಬಳಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 
 
ಗ್ಲೋಬಲ್ ಪಬ್ಲಿಕ್ ಒಪಿನಿಯನ್ ರಿಸರ್ಚ್ ಕನ್ಸಲ್‌ಟನ್ಸಿ ಸಂಸ್ಥೆ ಅಮೆರಿಕ, ಬ್ರಿಟನ್, ಬ್ರೆಜಿಲ್, ಚೀನಾ , ಸ್ಪೇನ್, ಮ್ಯಾಕ್ಸಿಕೋ ಮತ್ತು ಭಾರತದಲ್ಲಿ ಒಟ್ಟು 7112 ಸ್ಮಾರ್ಟ್‌ಫೋನ್ ಮಾಲೀಕರನ್ನು ಸಂದರ್ಶಿಸಿ ಸಮೀಕ್ಷೆ ನಡೆಸಿತ್ತು.  

ವೆಬ್ದುನಿಯಾವನ್ನು ಓದಿ