ಇಂಟರ್‌ನೆಟ್ ಬಳಕೆಯಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆ ಭಾರತ

ಶನಿವಾರ, 16 ಆಗಸ್ಟ್ 2014 (19:39 IST)
2018ರವರೆಗೆ ಭಾರತದಲ್ಲಿ 25 ಕೋಟಿ ಜನ ಇಂಟರ್‌ನೆಟ್‌ ಬಳಕೆದಾರರಾಗಲಿದ್ದಾರೆ ಎಂದು ಗೂಗಲ್‌ ಇಂಡಿಯಾದ ಮ್ಯಾನೇಜಿಂಗ್‌ ಡೈರೆಕ್ಟರ್‌ ರಾಜನ್‌ ಆನಂದನ್‌ ತಿಳಿಸಿದ್ದಾರೆ. 
 
" ಭಾರತದಲ್ಲಿ ಇಂಟರ್‌ನೆಟ್‌ ಬಳಕೆಯ ವಿಸ್ತಾರ ನೋಡಿದರೆ 2018ರವರೆಗೆ ದೇಶದಲ್ಲಿ 50 ಕೋಟಿ ಇಂಟರ್‌ನೆಟ್‌ ಬಳಕೆದಾರು ಇರಲಿದ್ದಾರೆ. ಈ ವರ್ಷದ ಅಂತ್ಯದವರೆಗೆ ಭಾರತದಲ್ಲಿ ಅಮೆರಿಕಾಗಿಂತ ಹೆಚ್ಚಿನ ಇಂಟರ್‌‌ನೆಟ್‌ ಬಳಕೆದಾರರಿರಲಿದ್ದಾರೆ" ಎಂದು ರಾಜನ್‌‌‌ ಆನಂದನ್‌‌‌‌ ಫಿಕ್ಕಿಯ ಒಂದು ಕಾರ್ಯಕ್ರಮವಾದ 'ಡಿಜಿಟಾಯಿಜಿಂಗ್‌ ಇಂಡಿಯಾ' ದಲ್ಲಿ ತಿಳಿಸಿದ್ದಾರೆ. 
 
ವಿಶ್ವಬ್ಯಾಂಕ್‌‌ನ 2013 ಸಾಲಿನ ವರದಿಯ ಪ್ರಕಾರ ಶೇ.84.2 ಅಂದರೆ ಸುಮಾರು 27 ಕೋಟಿ ಜನರು ಅಮೆರಿಕಾದಲ್ಲಿ ಆನ್‌‌ಲೈನ್‌ ಬಳಸುತ್ತಾರೆ, ಆದರೆ, ಭಾರತದಲ್ಲಿ ಶೇ.15 ರಷ್ಟು ಜನರು ಆನ್‌‌ಲೈನ್‌ ಬಳಕೆ ಮಾಡುತ್ತಾರೆ. ಟ್ರಾಯ್ ಅನುಸಾರ, ಭಾರತದಲ್ಲಿ 24 ಕೋಟಿ ಜನರು ಇಂಟರ್‌ನೆಟ್‌ ಬಳಸುತ್ತಾರೆ. 
 
ಭಾರತದಲ್ಲಿ ಇಂಟರ್‌ನೆಟ್‌‌ ಬಳಕೆದಾರರ ಸಂಖ್ಯೆ ಒಂದು ಕೋಟಿಯಿಂದ 10 ಕೋಟಿಗೆ ತಲುಪಲು 10 ವರ್ಷ ಹಿಡಿಯುತ್ತದೆ  ಮತ್ತು ಪ್ರತಿ ತಿಂಗಳು 50 ಲಕ್ಷ ಜನರು ಇಂಟರ್‌‌ನೆಂಟ್‌ ಬಳಸಲು ಪ್ರಾರಂಭಿಸುತ್ತಿದ್ದಾರೆ ಎಂದು ರಾಜನ್‌ ಆನಂದನ್‌ ತಿಳಿಸಿದ್ದಾರೆ. 
 
ಇಂಟರ್‌‌ನೆಟ್‌‌ ಸೌಲಭ್ಯಗಳು ಹೊಂದಿರುವ ಕಡಿಮೆ ದರದ ಸ್ಮಾರ್ಟ್‌‌ಫೋನ್‌ಗಳು ಕೂಡ ಇಂಟರ್‌ನೆಟ್‌‌‌ ಪ್ರಸಾರದಲ್ಲಿ ಮಹತ್ವದ ಪಾತ್ರವಹಿಸುತ್ತಿವೆ. 
 
ಮಾರುಕಟ್ಟೆಯಲ್ಲಿ ಎರಡೂವರೆ ಸಾವಿರದಿಂದ ಮೂರು ಸಾವಿರ ರೂಪಾಯಿಗಳಲ್ಲಿ ಆಂಡ್ರೈಡ್‌‌ ಮೊಬೈಲ್‌‌ ಫೋನ್‌ ಖರೀದಿಸಬಹುದಾಗಿದೆ. ಇಷ್ಟೆ ಅಲ್ಲ, ಇಂಟರ್‌ನೆಟ್‌‌‌ ಸೌಲಭ್ಯ ಹೊಂದಿರುವ ಫಿಚರ್‌ ಫೋನ್‌‌ಗಳು ಕೂಡ ಒಂದು ಸಾವಿರ ರೂಪಾಯಿಗಳವರೆಗೆ ಲಭ್ಯವಾಗುತ್ತಿವೆ. ಈ ಎಲ್ಲ ಬೆಳವಣಿಗೆಯಿಂದ ದೇಶದಲ್ಲಿ ಇಂಟರ್‌‌ನೆಟ್‌‌‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಗೂಗಲ್‌ ಇಂಡಿಯಾದ ಮ್ಯಾನೇಜಿಂಗ್‌ ಡೈರೆಕ್ಟರ್‌ ರಾಜನ್‌ ಆನಂದನ್‌ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ