ಭವಿಷ್ಯದಲ್ಲಿ ಇಂಟರ್ನೆಟ್ ವೋಟಿಂಗ್ ಸಾಧ್ಯತೆ: ಸಿಇಸಿ

ಶುಕ್ರವಾರ, 27 ಫೆಬ್ರವರಿ 2015 (18:37 IST)
ಅಂತರ್ಜಾಲದ ಮೂಲಕ ಮತದಾನ ಮಾಡುವುದು ಭವಿಷ್ಯದ ಸಾಧ್ಯತೆಯಾಗಲಿದೆ ಎಂದು ಮುಖ್ಯ ಚುನಾವಣೆ ಆಯುಕ್ತ ಎಚ್.ಎಸ್. ಬ್ರಹ್ಮ ಹೇಳಿದ್ದು, ಈ ದಿಕ್ಕಿನಲ್ಲಿ ಮೊದಲ ಹೆಜ್ಜೆ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ದೋಷರಹಿತವನ್ನಾಗಿ ಮಾಡುವುದು ಎಂದು ತಿಳಿಸಿದ್ದಾರೆ.
 
 ಮುಂದಿನ ಹಂತ ಇಂಟರ್ನೆಟ್ ಮೂಲಕ ಮತದಾನ. ಆದ್ದರಿಂದ ಮತದಾರರ ಪಟ್ಟಿಯಲ್ಲಿ ಯಾವುದೇ ತಪ್ಪುಗಳಿರದಂತೆ ಮಾಡುವುದು ಚುನಾವಣೆ ಆಯೋಗದ ಮಹತ್ವಾಕಾಂಕ್ಷಿ ಯೋಜನೆ ಎಂದು ತಿಳಿಸಿದರು.  

ಆದರೆ ಅದಕ್ಕೆ ಯಾವುದೇ ಕಾಲಮಿತಿಯನ್ನು ವಿಧಿಸಲಿಲ್ಲ. ನಮಗೆ ಹಣಕಾಸು, ಮೂಲಸೌಲಭ್ಯ ಮತ್ತು ತರಬೇತಿ ಸಿಕ್ಕಿದರೆ ಭಾರತ ಕೂಡ ಅದನ್ನು ಸಾಧಿಸುತ್ತದೆ ಎಂದು ಬ್ರಹ್ಮ ಹೇಳಿದರು.

ಅಂತರ್ಜಾಲದ ವೋಟಿಂಗ್‌ ಬಹಳಷ್ಟು ಸಮಯ, ಸಂಪನ್ಮೂಲಗಳು ಮತ್ತು ಶಕ್ತಿಯನ್ನು ಉಳಿಸುತ್ತದೆ ಎಂದು ಬ್ರಹ್ಮ ಹೇಳಿದರು.ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಾನು ಸರತಿಸಾಲಿನಲ್ಲಿ ನಿಂತಿದ್ದಾಗ ಐವರು ಯುವ ಮತದಾರರು ವೋಟ್ ಮಾಡುವುದಕ್ಕೆ ಕೆಲವೇ ಸೆಕೆಂಡುಗಳು ಸಾಕಾದರೂ ಕ್ಯೂನಲ್ಲಿ 2 ಗಂಟೆ ನಿಲ್ಲುವುದು ಕಷ್ಟದ ಕೆಲಸ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ