ಗ್ರಾಹಕರಿಗೆ ಸಂತಸದ ಸುದ್ದಿ: ಸೆ.7 ರಂದು ಆಪಲ್ ಐಫೋನ್-7 ಮಾರುಕಟ್ಟೆಗೆ

ಮಂಗಳವಾರ, 30 ಆಗಸ್ಟ್ 2016 (18:40 IST)
ಬಹು ನಿರೀಕ್ಷಿತ ಐಪೋನ್-7 ಬಿಡುಗಡೆಯ ದಿನಾಂಕವನ್ನು ಕೊನೆಗೂ ಆಪಲ್ ಸಂಸ್ಥೆ ಘೋಷಿಸಿದೆ. ಕ್ಯುಪರ್ಟಿನೋ ಆಧಾರಿತ ದೈತ್ಯ ಟೆಕ್ ಸಂಸ್ಥೆ, ಸೆಪ್ಟೆಂಬರ್ 7 ರಂದು ಐಪೋನ್-7 ಆವೃತ್ತಿಯ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ. 
 
ಆಪಲ್ ಸಂಸ್ಥೆ ಐಫೋನ್-7 ಮಾಡೆಲ್ ಮೊಬೈಲ್‌ನ್ನು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಪತ್ರಿಕೆಗಳಿಗೆ ಆಹ್ವಾನ ನೀಡಲು ಆರಂಭಿಸಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. 
 
ಮಾಧ್ಯಮಗಳಿಗೆ ಕಳುಹಿಸಿರುವ ಆಹ್ವಾನ ಪತ್ರಿಕೆಯಲ್ಲಿ ಆಪಲ್ ಲೋಗೋವನ್ನು ಹೂಗುಚ್ಚದಂತೆ ಚಿತ್ರಿಸಲಾಗಿದ್ದು, ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಬಿಲ್ ಗ್ರಹಾಮ್ ಸಿವಿಕ್ ಆಡಿಟೋರಿಯಂನಲ್ಲಿ ಸೆಪ್ಟೆಂಬರ್ 7 ರಂದು ನಡೆಯುವ ಕಾರ್ಯಕ್ರಮದಲ್ಲಿ ಭೇಟಿಯಾಗೋಣ ಎಂದು ಮುದ್ರಿಸಲಾಗಿದೆ. 
 
ಆಹ್ವಾನ ಪತ್ರಿಕೆ ತಿಳಿಸುವಂತೆ, ಐಪೋನ್-7 ಬಿಡುಗಡೆಯ ಸಮಾರಂಭ ಸ್ಯಾನ್ ಫ್ರಾನ್ಸಿಸ್ಕೋದ ಬಿಲ್ ಗ್ರಹಾಮ್ ಸಿವಿಕ್ ಆಡಿಟೋರಿಯಂನಲ್ಲಿ ನಡೆಯಲಿದ್ದು, ಆಪಲ್ ಸಂಸ್ಥೆಯ ಜನಪ್ರಿಯ ಉತ್ಪನ್ನಗಳ ಬಿಡುಗಡೆ ಮಾಡಲು ಈ ಆಡಿಟೋರಿಯಂ ನೆಚ್ಚಿನ ಸ್ಥಳವಾಗಿ ಮಾರ್ಪಟ್ಟಿದೆ. ಈ ಆಡಿಟೋರಿಯಂನಲ್ಲಿ 7000 ಆಸನಗಳಿದ್ದು, ಆಪಲ್ ಸಂಸ್ಥೆಯು ಪ್ರಸಕ್ತ ವರ್ಷದ ವಿಶ್ವಾದ್ಯಂತ ಅಭಿವರ್ಧಕರ ಸಮ್ಮೇಳನವನ್ನು ನಡೆಸಿದೆ. ಈ ವೇಳೆ, ಆಪಲ್ ಸಂಸ್ಥೆ, ಐಓಎಸ್-10, ಮ್ಯಾಕ್-ಓಎಸ್ ಸಿಯೆರಾ ಮತ್ತು ವಾಟ್ಚ್ ಓಎಸ್ 2 ಸೇರಿದಂತೆ ಹೊಸ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಬಿಡುಗಡೆಗೊಳಿಸಿತ್ತು. 
 
 
ಇತ್ತೀಚಿನ ಆನ್‌ಲೈನ್ ವರದಿಯ ಪ್ರಕಾರ, ಆಪಲ್ ಸಂಸ್ಥೆ ಆಡಿಯೋ ಔಟ್‌ಪುಟ್‌ನಲ್ಲಿ 3.5ಎಂಎಂ ಆಡಿಯೋ ಜಾಕ್ ಅಳವಡಿಸಲು ನಿರ್ಧರಿಸಿದ್ದು, ಭವಿಷ್ಯದ ಐಫೋನ್‌ಗಳನ್ನು ಗಮನದಲ್ಲಿಟ್ಟುಕೊಂಡು ಮತ್ತಷ್ಟು ಮೊಬೈಲ್ ಹ್ಯಾಂಡ್‌ಸೆಟ್‌ನ್ನು ತೆಳುವಾಗಿಸಲು ಐಫೋನ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ