ಜಾಗ್ವರ್ ಲಾಂಡ್‌ ರೋವರ್‌ನಿಂದ ಡಿಸ್ಕವರಿ ಸ್ಫೋರ್ಟ್ಸ್ ಕಾರು ಮಾರುಕಟ್ಟೆಗೆ

ಬುಧವಾರ, 22 ಜೂನ್ 2016 (18:07 IST)
ಐಷಾರಾಮಿ ಕಾರು ತಯಾರಿಕಾ ಸಂಸ್ಥೆಯಾಗಿರುವ ಜಾಗ್ವಾರ್ ಲ್ಯಾಂಡ್ ರೋವರ್ (ಜೆ.ಎಲ್.ಆರ್), ಪೆಟ್ರೋಲ್ ಆವೃತ್ತಿಯ ಲ್ಯಾಂಡ್ ರೋವರ್ ಡಿಸ್ಕವರಿ ಸ್ಫೋರ್ಟ್ಸ್ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಆವೃತ್ತಿಯ ಕಾರುಗಳು ದೆಹಲಿ ಶೋ ರೂಮ್ ದರ ಹೊರತು ಪಡಿಸಿ 56.50 ಲಕ್ಷ ರೂಪಾಯಿ ಆರಂಭಿಕ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. 
 
ಸುಪ್ರೀಂಕೋರ್ಟ್ ಡೀಸೆಲ್ ವಾಹನಗಳ ಮೇಲ ನಿಷೇಧ ಹೇರಿದ್ದರಿಂದ ವಹಿವಾಟಿನ ಮೇಲೆ ತುಂಬಾ ಋಣಾತ್ಮಕ ಫ್ರಭಾವ ಬೀರಿದ್ದು, ಕಾನೂನು ಹೋರಾಟ ಮುಂದುವರಿದಿದೆ ಎಂದು ತಿಳಿಸಿದೆ.
 
ಟಾಟಾ ಮೋಟರ್ಸ್ ಸ್ವಾಮ್ಯದ ಜಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆ, ವಹಿವಾಟು ಪರಿಸರದಲ್ಲಿ ಬದಲಾವಣೆಗಳಾಗುತ್ತಿರುವ ಮಧ್ಯೆ ಭಾರತದ ಮಾರುಕಟ್ಟೆಯಲ್ಲಿ ಅಸ್ತಿತ್ವ ಸಾಧಿಸಲು ಮುಂದಾಗಿದೆ. ಭಾರತದ ಕೆಲ ರಾಜ್ಯಗಳಲ್ಲಿ ಡೀಸೆಲ್ ವಾಹನಗಳನ್ನು ನಿಷೇಧಿಸಿರುವುದು ಸಂಸ್ಥೆಯ ಮೇಲೆ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಸಂಸ್ಥೆ ಮುಂದಿನ ದಿನಗಳಲ್ಲಿ ಹೆಚ್ಚು ಪೆಟ್ರೋಲ್ ವಾಹನಗಳನ್ನು ಪರಿಚಯಿಸಲು ಮುಂದಾಗಿದೆ. 
 
ಭಾರತದ ಮಾರುಕಟ್ಟೆಯಲ್ಲಿ ಡಿಸ್ಕವರಿ ಸ್ಫೋರ್ಟ್ಸ್ ಪೆಟ್ರೋಲ್ ಆವೃತ್ತಿಯ ವಾಹನಗಳನ್ನು ಬಿಡುಗಡೆ ಮಾಡುವ ಕುರಿತು ಸಂಸ್ಥೆ ಯೋಜನೆ ರೂಪಿಸಿರಲಿಲ್ಲ. ನಂತರ ಭಾರತಲ್ಲಿ ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸಲಾಯಿತು. ಆದ್ದರಿಂದ, ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಿತು.ಎಂದು ಜೆಎಲ್‌ಆರ್ ಇಂಡಿಯಾ ಅಧ್ಯಕ್ಷ ರೋಹಿತ್ ಸೂರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ