ಜೆಟ್ ಇಂಧನ ದರ ಶೇ. 11.3 ಕಡಿತ: ಡೀಸೆಲ್‌ಗಿಂತ ದರ ಕಡಿಮೆ

ಭಾನುವಾರ, 1 ಫೆಬ್ರವರಿ 2015 (15:33 IST)
ಜೆಟ್ ಇಂಧನದ ದರವನ್ನು ಶೇ. 11.3ರಷ್ಟು ತೀವ್ರ ಕಡಿತ ಮಾಡಲಾಗಿದ್ದು, ಡೀಸೆಲ್‌ಗಿಂತ ಜೆಟ್ ಇಂಧನದ ದರ ಕಡಿಮೆಯಾಗಿದೆ. ಕಳೆದ ತಿಂಗಳ ಇದರ ದರ ಪೆಟ್ರೋಲ್ ಮಾರಾಟದ ದರಕ್ಕಿಂತ ಕಡಿಮೆಯಾಗಿತ್ತು.

ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲವಾದರೂ ಸಬ್ಸಿಡಿಯೇತರ ಅಡುಗೆ ಅನಿಲ ದರದಲ್ಲಿ 103. 5 ರೂ. ಕುಸಿತ ಮಾಡಲಾಗಿದ್ದು, ಸಿಲಿಂಡರ್‌ಗೆ 605 ರೂ. ಮುಟ್ಟಿದೆ.ದೆಹಲಿಯಲ್ಲಿ ಜೆಟ್ ಇಂಧನದ ದರವನ್ನು ಕಿಲೋಲೀಟರ್‌ಗೆ 5909.9 ರೂ. ನಷ್ಟು 11.27 ಶೇ. ಕಡಿತ ಮಾಡಿದ್ದರಿಂದ ಪ್ರತಿ ಕಿಲೋಲೀಟರ್‌ಗೆ 46,513.02ಕ್ಕೆ ತಲುಪಿದೆ ಎಂದು ತೈಲ ಕಂಪನಿಗಳು ಪ್ರಕಟಿಸಿವೆ. 
 
ಜೆಟ್ ಇಂಧನದಲ್ಲಿ ಇಂದಿನ ಕಡಿತದಿಂದ ಅದರ ದರ ಲೀಟರ್‌ಗೆ 46.51 ರೂ.ಗಳಾಗಿದ್ದು, ಡೀಸೆಲ್‌ಗಿಂತ ಅಗ್ಗವಾಗಲಿದೆ. ಡೀಸೆಲ್ ಲೀಟರ್‌ಗೆ ರೂ. 51.52ರಂತೆ ಮಾರಲಾಗುತ್ತಿದೆ. ಜೆಟ್ ಇಂಧನದ ದರ ಕಡಿತದಿಂದ ಸಂಕಷ್ಟಕ್ಕೆ ಈಡಾಗಿದ್ದ ವಿಮಾನ ಸಂಸ್ಥೆಗಳು ನಿಟ್ಟುಸಿರುಬಿಡುವಂತಾಗಿದೆ. 

ವೆಬ್ದುನಿಯಾವನ್ನು ಓದಿ