50 ವಿದೇಶಿ ಪೈಲಟ್‌ಗಳನ್ನು ನೇಮಕ ಮಾಡಿಕೊಳ್ಳಲಿರುವ ಜೆಟ್‍ ಏರ್‌ವೇಸ್

ಮಂಗಳವಾರ, 5 ಏಪ್ರಿಲ್ 2016 (18:34 IST)
ಜೆಟ್ ವಿಮಾನಯಾನ ಸಂಸ್ಥೆ ತನ್ನ ಬೃಹತ್  ಬಿ-777 ವಿಮಾನ ಹಾರಾಟಕ್ಕಾಗಿ 50 ಪರಿಣಿತ ವಿದೇಶಿ ಪೈಲಟ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. 
ಪ್ರಸಕ್ತವಾಗಿ ಈ ವಿಮಾನಗಳನ್ನು ಅಬುಧಾಭಿ ಮೂಲದ ಎತಿಹಾದ್ ಏರ್‌ಲೈನ್ಸ್ ಸಂಸ್ಥೆ ಭೋಗ್ಯಕ್ಕೆ ಪಡೆದುಕೊಂಡಿದ್ದು, ಜೂನ್‌ನಿಂದ ಭಾರತಕ್ಕೆ ಸಂಚಾರ ಆರಂಭಿಸುವ ಸಾದ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಜೆಟ್ ಏರ್‌ವೇಸ್ ದೀರ್ಘಾವಧಿ ಹಾರಾಟಕ್ಕಾಗಿ ವಿಮಾನಗಳನ್ನು ಬಳಸಿಕೊಳ್ಳುತ್ತಿದ್ದು ಆಮ್‌ಸ್ಟರ್‌ಡಮ್, ಪ್ಯಾರಿಸ್, ಮತ್ತು ಟೋರೆಂಟೋ ನಗರಗಳಿಗೆ ಹಾರಾಟ ನಡೆಸಲು ಯೋಜನೆ ರೂಪಿಸಿದೆ ಎಂದು ಜೆಟ್‌ ಏರ್‌ವೇಸ್ ವಕ್ತಾರರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ