ಮೂರು ದಿನ ಅಂಗಡಿ ಮುಗ್ಗಟ್ಟು ಬಂದ್: ಚಿನ್ನಾಭರಣ ವರ್ತಕರ ಪ್ರತಿಭಟನೆ

ಮಂಗಳವಾರ, 26 ಏಪ್ರಿಲ್ 2016 (16:37 IST)
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಾಭರಣ ಮಳಿಗೆಗಳು ಮತ್ತು ಶೋರೂಮ್‌ಗಳು ಸೇವೆಯನ್ನು ಸ್ಥಗಿತಗೊಳಿಸಲಿವೆ ಎಂದು ಆಲ್ ಇಂಡಿಯಾ ಸರಾಫ್ ಅಸೋಸಿಯೇಷನ್‌ ಉಪಾಧ್ಯಕ್ಷ ಸುರೀಂದರ್ ಕುಮಾರ್ ಜೈನ್ ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಚಿನ್ನಾಭರಣಗಳ ಮೇಲೆ ೧% ಅಬಕಾರಿ ತೆರಿಗೆ ವಿಧಿಸಿರುವ ಪ್ರಸ್ತಾವನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ವರ್ತಕರು ಮುಷ್ಕರವನ್ನು ಮತ್ತೆ ಆರಂಭಿಸಿದ್ದಾರೆ.
 
ಸಣ್ಣ ಪಟ್ಟಣಗಳು ಸೇರಿದಂತೆ ಎಲ್ಲ ನಗರಗಳಲ್ಲಿ 3 ದಿನಗಳ ಕಾಲ ಚಿನ್ನಾಭರಣ ಮಳಿಗೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಜೈನ್ ತಿಳಿಸಿದ್ದಾರೆ.
 
ದೆಹಲಿಯ ಜಂತರ್ ಮಂತರ್‌ನಲ್ಲಿ ಇದು ಚಿನ್ನಾಭರಣ ವರ್ತಕರು ಮತ್ತು ಕುಶಲಕರ್ಮಿಗಳು ಮುಷ್ಕರ ಪ್ರಾರಂಭಿಸಿದ್ದು, ದೇಶದ ಇತರೆ  ಅಸೋಸಿಯೇಷನ್‌‌ಗಳು ಮುಷ್ಕರಕ್ಕೆ ಕೈಜೊಡಿಸಿವೆ.
 
ರಾಜಸ್ತಾನ್‌ ಸೇರಿದಂತೆ, ಉತ್ತರ ಪ್ರದೇಶ, ಜೋಧಪುರ್, ಕೋಟಾ ಮತ್ತು ಕಾನ್ಪೂರ್‌ದ 3000 ಕ್ಕೂ ಹೆಚ್ಚು ಆಭರಣ ಮಳಿಗೆಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿವೆ.

ವೆಬ್ದುನಿಯಾವನ್ನು ಓದಿ