ಜಿಯೋ ಮೂಲಕ ಭಾರತಕ್ಕೂ ಬಂತು ’ಪೋಕೆಮನ್ ಗೋ’

ಗುರುವಾರ, 15 ಡಿಸೆಂಬರ್ 2016 (08:14 IST)
ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (``ಜಿಯೋ'') ಮೊತ್ತಮೊದಲ ಬಾರಿಗೆ ರಿಯಾಲಿಟಿ ಗೇಮ್ ಪೋಕೆಮನ್ ಗೋ ಅನ್ನು ನಿಯಾನ್‍ಟಿಕ್, ನೊಂದಿಗಿನ ಸಹಭಾಗಿತ್ವದಲ್ಲಿ ಭಾರತಕ್ಕೆ ತರಲಾಗಿದ್ದು, ಭಾರತೀಯ ಗೇಮರ್‍ಗಳಿಗೆ ಖುಷಿಯನ್ನು ತಂದಿದೆ. ಈ ಸಹಭಾಗಿತ್ವದೊಂದಿಗೆ ಸಾವಿರಾರು ರಿಲಯನ್ಸ್ ಡಿಜಿಟಲ್ ಸ್ಟೋರ್‍ಗಳಲ್ಲಿ ಮತ್ತು ಭಾರತದಲ್ಲಿನ  ಆಯ್ದ ಪಾಲುದಾರ ಮಳಿಗೆಗಳಲ್ಲಿ ಪೋಕೆಸ್ಟಾಪ್ಸ್ ಅಥವಾ ಜಿಮ್ಸ್ ಕಾಣಿಸಿಕೊಳ್ಳಲಿದ್ದು, ಡಿಸೆಂಬರ್ 14, 2016 ಬುಧವಾರದಿಂದ ಪೋಕೆಮನ್ ಗೋ ಆರಂಭಗೊಳ್ಳಲಿದೆ.
 
ಭಾರತೀಯರನ್ನು ಅವಕಾಶಗಳೊಂದಿಗೆ ಸಬಲೀಕರಣಗೊಳಿಸುವ ಜಿಯೋದ ಮಿಶನ್‍ನ ನಿಟ್ಟಿನಲ್ಲಿ ಇದರ ಚಾಲನೆ ನೀಡಲಾಗಿದ್ದು, ಇದು ಡಾಟಾದ ಶಕ್ತಿ ಮತ್ತು ಡಿಜಿಟಲ್ ಲೈಫ್‍ನಿಂದ ಚಾಲಿತವಾಗಿರಲಿದೆ. ಗೇಮಿಂಗ್ ವಿಭಾಗದಲ್ಲಿ ಪೋಕೆಮನ್ ಗೋ ಮುಂಚೂಣಿ ಆ್ಯಪ್ ಆಗಿರಲಿದೆ.
 
``ಪೋಕೆಮನ್ ಗೋ ಅನ್ನು ಜಿಯೋದ ಪಾಲುದಾರಿಕೆಯೊಂದಿಗೆ ಭಾರತದಲ್ಲಿ ಚಾಲನೆ ನೀಡುತ್ತಿರುವುದಕ್ಕೆ ನಮಗೆ ಖುಷಿಯಾಗುತ್ತಿದೆ''  ಎಂದು ಜಾನ್ ಹ್ಯಾಂಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಂಸ್ಥಾಪಕರು, ನಿಯಾನ್‍ಟಿಕ್ ಹೇಳಿದರು. ``ಭಾರತದಲ್ಲಿನ ಪೋಕೆಮನ್ ಅಭಿಮಾನಿಗಳನ್ನು ಕಾಣುವುದು ರೋಮಾಂಚಕಾರಿಯಾಗಿದೆ. ಹೊರಗಡೆ ಬನ್ನಿ, ಪೋಕೆಮನ್ ಹುಡುಕಾಟದಲ್ಲಿ ತಮ್ಮ ನೆರೆಯಲ್ಲೆಲ್ಲಾ ಅನ್ವೇಷಿಸಿ ಮತ್ತು ಜಿಯೋದ ಹೈ ಸ್ಪೀಡ್ 4ಜಿ ಎಲ್‍ಟಿಇ ನೆಟ್‍ವರ್ಕ್ ಈ ಗೇಮ್‍ನ ಅದ್ಭುತ ಅನುಭವ ಒದಗಿಸಿದೆ''  ಎಂದೂ ಅವರು ಹೇಳಿದರು.
 
ಈ ಎರಡು ಕಂಪನಿಗಳು ಒಟ್ಟಾಗಿ ಕಾರ್ಯನಿರ್ವಹಿಸಲಿದ್ದು, ಭಾರತೀಯರಿಗೆ ಉತ್ಕೃಷ್ಟ ಮೊಬೈಲ್ ಮನರಂಜನೆಯ ಅನುಭವವನ್ನು ಒದಗಿಸಲಿವೆ. ಪೋಕೆಮನ್ ಗೋಗಾಗಿ ಜಿಯೋ ರಿಟೈಲ್ ಸ್ಥಳಗಳಲ್ಲಿ ಮತ್ತು ಚಾರ್ಜಿಂಗ್ ಸ್ಟೇಶನ್‍ಗಳಲ್ಲಿ ಪೋಕೆಮನ್ ಸ್ಟಾಪ್ಸ್ ಮತ್ತು ಜಿಮ್ಸ್ ಆಗಿ ಹೊಂಬಹುದಾಗಿದೆ. ಮತ್ತು ಭಾರತೀಯರು ದೇಶಾದ್ಯಂತ ಇರುವ ಜಿಯೋದ ಯಾವುದೇ ಮಳಿಗೆಗಳಲ್ಲಿ ಹಿಡಿಯಬಹುದು, ಆಟವಾಡಬಹುದಾಗಿದೆ. ಜಿಯೋದ ಸೋಶಿಯಲ್ ಮೆಸೇಜಿಂಗ್ ಆ್ಯಪ್, ಜಿಯೋಚಾಟ್, ಪೋಕೆಮನ್ ಪ್ಲೇಯರ್ಸ್ ವಿಶಿಷ್ಟ ಪೋಕೆಮನ್ ಗೋ ಚಾನೆಲ್ ಅನ್ನು ಹೊಂದಲು ಅನುಮತಿಸುತ್ತದೆ.
 
``ಜಾಗತಿಕವಾಗಿ 500 ಮಿಲಿಯನ್‍ಗೂ ಮಿಕ್ಕಿದ ಡೌನ್‍ಲೋಡ್‍ಗಳಾಗಿದ್ದು, ಇದೀಗ ಅಧಿಕೃತವಾಗಿ ಭಾರತದಲ್ಲಿ ರಿಲಯನ್ಸ್ ಜಿಯೋದಲ್ಲಿ ಪೋಕೆಮನ್ ಗೋದ ಚಾಲನೆಯಿಂದ ನಾವು ರೋಮಾಂಚನಗೊಂಡಿದ್ದೇವೆ'' ಎಂದು ಮ್ಯಾಥ್ಯೂ ಒಮ್ಮನ್, ಅಧ್ಯಕ್ಷರು ರಿಲಯನ್ಸ್ ಜಿಯೋ ಅವರು ಹೇಳಿದರು. ``
 
ಹ್ಯಾಪಿ ನ್ಯೂ ಯೀಯರ್ ಆಫರ್‍ನ ವೇಳೆಯಲ್ಲಿ ಜಿಯೋ ಸಿಮ್ ಹೊಂದಿರುವ ಗ್ರಾಹಕರು ಪೋಕೆಮನ್ ಗೋ ಡೌನ್‍ಲೋಡ್ ಮಾಡಿಕೊಂಡು ಡಾಟಾ ಶುಲ್ಕಗಳ ಚಿಂತೆಯಿಲ್ಲದೆ, ಇತರೆ ಆ್ಯಪ್‍ಗಳು ಹಾಗೂ ವಿಷಯಗಳಂತೆ ಇಲ್ಲೂ ಆಟವಾಡಬಹುದು. 31ನೇ ಮಾರ್ಚ್ 2017ರ ತನಕ ಈ ಅವಕಾಶವಿರಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ