ನೀವೀಗ ಕಾರ್ಡ್ ಇಲ್ಲದೇ ಎಟಿಎಂನಿಂದ ಹಣ ಪಡೆಯಬಹುದು ಹೇಗೆ ಗೊತ್ತಾ?

ಮಂಗಳವಾರ, 15 ಜುಲೈ 2014 (18:30 IST)
ಎಟಿಎಂ ಕಾರ್ಡ್‌ನ್ನು ಮನೆಯಲ್ಲಿ ಮರೆತು ಬಂದು ಹಣ ತುರ್ತು ಹಣ ಪಡೆಯಲಾಗದೇ ಪರದಾಡುವ ಪರಿಸ್ಥಿತಿ ಇನ್ನು ಕೆಲವು ದಿನಗಳಲ್ಲಿ ನಿಮ್ಮನ್ನು ಕಾಡದು. ಏಕೆಂದರೆ ಕಾರ್ಡ್ ಇಲ್ಲದೇ ಹಣ ಪಡೆಯುವ ಹೊಸ ಸಿಸ್ಟಮ್ ಒಂದನ್ನು ಜಾರಿಗೆ ತರಲು ಬ್ಯಾಂಕಿಂಗ್ ವಿಭಾಗ ಯೋಜನೆ ರೂಪಿಸುತ್ತಿದೆ. 

ಮೊಬೈಲ್ ಕೋಡ್ ಆಧಾರದ ಮೇಲೆ ಮತ್ತು ಎಟಿಎಂ ಕಾರ್ಡ್ ಹೊಂದಿರುವವರಿಂದ ಅನುಮತಿಯನ್ನು ಪಡೆದ ನಂತರ  ಈ ಹೊಸ ಸಿಸ್ಟಮ್‌ನ್ನು ಬಳಸಿಕೊಳ್ಳಬಹುದು. 
 
ಪ್ರಸ್ತುತ ಭಾರತದಲ್ಲಿ 54 ಕೋಟಿ ಬ್ಯಾಂಕ್ ಗ್ರಾಹಕರಿದ್ದು, ಅವರಲ್ಲಿ 40ಕೋಟಿ ಜನರು ಎಟಿಮ್ ಕಾರ್ಡ್ ಹೊಂದಿದ್ದಾರೆ.
 
ಅಲ್ಲದೇ 90.000 ಕೋಟಿ ಮೊಬೈಲ್ ಬಳಕೆದಾರರು ಕೂಡ ದೇಶದಲ್ಲಿದ್ದು, ಈ ಸಿಸ್ಟಮ್ ಎಟಿಮ್ ಕಾರ್ಡ್ ಹೊಂದಿರುವ 40 ಕೋಟಿ ಜನರಿಗೆ ಲಾಭಕರವಾಗಲಿದೆ. 
 
ಎಟಿಎಂ ಕಾರ್ಡ್ ಹೋಲ್ಡರ್ ವ್ಯಕ್ತಿ  ಕಾರ್ಡ್ ಬಳಸಿ ಅಥವಾ ನೆಟ್ ಬ್ಯಾಕಿಂಗ್ ಮೂಲಕ ಹಣ ವಿತ್ ಡ್ರಾ ಮಾಡುವ ವ್ಯಕ್ತಿಯ ಹೆಸರು, ದೂರವಾಣಿ ಸಂಖ್ಯೆ, ನಗರದ ಹೆಸರನ್ನು ಹೇಳಬೇಕಾಗುತ್ತದೆ. 
 
ಆಗ ಕಾರ್ಡ್ ಹೋಲ್ಡರ್ ಮೊಬೈಲ್‌ಗೆ  ಮತ್ತು ಹಣ ಪಡೆಯುವ ವ್ಯಕ್ತಿಯ ಮೊಬೈಲ್‌ಗೆ  ಒಂದು ಕೋಡ್ ಸಂಖ್ಯೆಯನ್ನು ಕಳುಹಿಸಲಾಗುತ್ತದೆ. ಅ ಕೋಡ್ ನಂಬರ್‌ನ್ನು ಎಟಿಎಮ್‌ನಲ್ಲಿ ನಮೂದಿಸಿದ ನಂತರ ಹೊಸ ಕೋಡ್ ಸಂಖ್ಯೆಯನ್ನು ಅವರಿಗೆ ನೀಡಲಾಗುತ್ತದೆ. 
 
ಎಟಿಎಂ ಕಾರ್ಡ್ ಹೋಲ್ಡರ್ ಅಥವಾ ಹಣ ಪಡೆಯುವ ವ್ಯಕ್ತಿ ನೀಡಿರುವ ಕೋಡ್ ಹೋಲಿಕೆಯಾದರೆ ಮಾತ್ರ  ಹಣ  ಪಡೆಯಲು ಅನುಮತಿ ನೀಡಲಾಗುತ್ತದೆ. 
 
ಹಳ್ಳಿಗರು, ಗ್ರಾಮಾಂತರ ಜನರು ಅಥವಾ ತುರ್ತು ಸನ್ನಿವೇಶದಲ್ಲಿ, ಈ ವ್ಯವಸ್ಥೆ ತುಂಬ ಸಹಕಾರಿಯಾಗಿದ್ದು,  ರಿಸರ್ವ್ ಬ್ಯಾಂಕ್ ಪ್ರಕಾರ  ಈ ಪದ್ಧತಿ ಪ್ರಾರಂಭವಾದರೆ ಹಳ್ಳಿಗಳಲ್ಲಿನ ಜನರು ಸಾಲದಾತರಿಂದ, ದೂರದ ಪ್ರದೇಶಗಳಲ್ಲಿ ವಾಸವಾಗಿರುವ ತಮ್ಮ ಸಂಬಂಧಿಗಳಿಂದ ತುರ್ತು ಹಣ  ಪಡೆಯಲು ಸಹಾಯಕವಾಗುತ್ತದೆ .
 
ರಿಸರ್ವ್ ಬ್ಯಾಂಕ್ ಶೀಘ್ರದಲ್ಲೇ ಕಣ್ಣು ಕಾಣದವರಿಗಾಗಿ ಎಟಿಎಂ ನಲ್ಲಿ ಬ್ರೈಲ್ ಟೈಪಿಂಗ್ ಪ್ಯಾಡ್‌ನ್ನು, ಮತ್ತು ಮಾತನಾಡುವ ಸಿಸ್ಟಮ್‌ನ್ನು ಕೂಡ ಅನುಸ್ಥಾಪಿಸಲಿದೆ. ಹೀಗಾಗಿ ದೃಷ್ಟಿ ಉಲ್ಲದವರು ಸುಲಭವಾಗಿ ಎಟಿಎಂ ಸೌಲಭ್ಯ ಬಳಸಿಕೊಳ್ಳಲು ಅನುಕೂಲವಾಗುತ್ತದೆ.

ವೆಬ್ದುನಿಯಾವನ್ನು ಓದಿ