ಮೊಬೈಲ್ ಸಂಖ್ಯೆಯಿಲ್ಲದೇ ವಾಟ್ಸಪ್‌ ಹೇಗೆ ಬಳಸುವುದು ಗೊತ್ತೆ?

ಸೋಮವಾರ, 25 ಏಪ್ರಿಲ್ 2016 (13:55 IST)
ತ್ವರಿತ ಸಂದೇಶ ಸೇವೆ ನೀಡುತ್ತಿರುವ ವಾಟ್ಸಪ್, ಬಳಕೆದಾರನ ಅವಿಭಾಜ್ಯ ಅಂಗವಾಗಿ ಬೆಳೆದು ನಿಂತಿದೆ. ಆದರೆ, ಮೊಬೈಲ್ ಪೋನ್ ಸಂಖ್ಯೆ ನೀಡದೆ, ವಾಟ್ಸಪ್ ಸೇವೆ ಬಳಸುವ ಕುರಿತು ತಿಳಿದಿದೇಯಾ?
ಈ ಕ್ರಮಗಳನ್ನು ಬಳಸಿ, ಮೊಬೈಲ್ ಪೋನ್ ಸಂಖ್ಯೆ ನೀಡದೆ, ವಾಟ್ಸಪ್ ಸೇವೆ ಬಳಸಿ.
 
1. ಮೊದಲು ನಿಮ್ಮ ಪೋನ್‌ನಲ್ಲಿರುವ ವಾಟ್ಸಪ್‌ನ್ನು ಅನ್ಇನ್‌‍ಸ್ಟಾಲ್ ಮಾಡಿ.
 
2. ಇದೀಗ ಮತ್ತೊಮ್ಮೆ ವಾಟ್ಸಪ್‌ ಡೌನ್‌ಲೋಡ್ ಮಾಡಿ, ಪುನಃ ಇನ್‌ಸ್ಟಾಲ್ ಮಾಡಿ.
 
3. ನಿಮ್ಮ ಮೊಬೈಲ್‌ನ್ನು ಫ್ಲೈಟ್ ಮೋಡ್‌ನಲ್ಲಿ ತಿರುಗಿಸಿ, ಎಲ್ಲ ಮೆಸೆಜಿಂಗ್ ಸೇವೆಯನ್ನು ಸ್ಥಗಿತಗೊಳಿಸಿ.  
 
4. ರಿಇನ್‌ಸ್ಟಾಲ್ಡ್ ವಾಟ್ಸಪ್‌ನಲ್ಲಿ ನಿಮ್ಮ ಇಷ್ಟದ ಸಂಖ್ಯೆಯನ್ನು ಸೇರಿಸಿ. ವಾಟ್ಸಪ್ ನಿಮ್ಮ ಸಂಖ್ಯೆಯನ್ನು ಸ್ವೀಕರಿಸುತ್ತದೆ ಆದರೆ ಯಾವುದೆ ಪರಿಶೀಲನಾ ಸಂದೇಶವನ್ನು ಬಳಕೆದಾರರಿಗೆ ನೀಡುವುದಿಲ್ಲ. 
 
5. ಪರಿಶೀಲನೆ ಇಲ್ಲದೆ, ಬಳಕೆದಾರರು ವಾಟ್ಸಪ್ ಸೇವೆಯನ್ನು ಬಳಸುವುದು ಅಸಾಧ್ಯ. ಹಾಗಾಗೀ ವಾಟ್ಸಪ್ ಪರ್ಯಾಯ ಪ್ರಕ್ರಿಯೆಯನ್ನು ಕೇಳುತ್ತದೆ. ತದನಂತರ, ಬಳಕೆದಾರರು ವೇರಿಫೈ ಥ್ರೂ ಎಸ್‌ಎಮ್‌ಎಸ್ ಆಯ್ಕೆಯನ್ನು ಆಯ್ದಕೊಂಡು, ತಮ್ಮ ಇ-ಮೇಲ್ ಐಡಿಯನ್ನು ಸೇರಿಸಬೇಕು.
 
6. ತದನಂತರ ಬಳಕೆದಾರರು ಸೆಟ್ ಬಟನ್‌ನ್ನು ಕ್ಲಿಕ್ ಮಾಡಿ ತಕ್ಷಣವೇ ಕ್ಯಾನ್ಸಲ್ ಬಟನ್‌ನ್ನು ಕ್ಲಿಕ್ ಮಾಡಿದರೆ, ವಾಟ್ಸಪ್ ಪ್ರಮಾಣೀಕರಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುತ್ತದೆ.
 
7. ಈಗ "ಸ್ಪೂಫ್ ಟೆಕ್ಸ್ಟ್ ಮೆಸೆಜ್" ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ.
 
8. ಈಗ, ನೀವು ಮೇಲೆ ತಿಳಿಸಿದ ಪ್ರಕ್ರಿಯೆಯನ್ನು ಪೂರೈಸಿ, ವಿವರಗಳನ್ನು ಭರ್ಟಿಮಾಡಿ.
 
ಟಿಓ: +447900347295
 
ಫ್ರಮ್:  + (ಕಂಟ್ರಿ ಕೋಡ್) ( ಮೊಬೈಲ್ ಸಂಖ್ಯೆ)
 
ಮೆಸೆಜ್: ಇ-ಮೇಲ್ ಐಡಿ
 
9. ಇಗ ನಿಮ್ಮ ಸಂಪೂರ್ಣ ಮಾಹಿತಿ ಮೇಲೆ ನೀಡಿರುವ ಸಂಖ್ಯೆಗೆ ರವಾನೆಯಾಗುತ್ತದೆ, ಮತ್ತು ನೀವು ಮೊಬೈಲ್ ಸಂಖ್ಯೆ ಇಲ್ಲದೆ ವಾಟ್ಸಪ್ ಬಳಸಬಹುದಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ