2015ರ ಮಾರ್ಚ್ 31ರಿಂದ ಎಲ್‌ಪಿಜಿ ಸಿಲಿಂಡರ್‌ಗೆ ಮಾರುಕಟ್ಟೆ ದರ

ಗುರುವಾರ, 27 ನವೆಂಬರ್ 2014 (15:35 IST)
ಆಧಾರ್ ಕಾರ್ಡ್ ಇರಲಿ ಅಥವಾ ಇಲ್ಲದಿರಲಿ, ಎಲ್‌ಪಿಜಿ ಸಿಲಿಂಡರ್‌ಗಳು 2015 ಮಾರ್ಚ್ 31ರಿಂದ ಸಬ್ಸಿಡಿ ದರದಲ್ಲಿ ಮಾರಾಟಗಾರರಿಂದ  ಲಭಿಸುವುದಿಲ್ಲ. ಇದಲ್ಲದೇ ಬ್ಯಾಂಕ್ ಖಾತೆಗಳಲ್ಲಿ ಅಡುಗೆ ಅನಿಲಕ್ಕೆ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಮಾನದಂಡವಲ್ಲ .

ಎಲ್‌ಪಿಜಿಯ ನೇರ ಸೌಲಭ್ಯ ವರ್ಗಾವಣೆ  ಯೋಜನೆಯನ್ನು  ನ. 15ರಂದು 54 ಜಿಲ್ಲೆಗಳಲ್ಲಿ ಮರುಜಾರಿಗೆ ತರಲಾಗಿದ್ದು, ಜನವರಿ ಒಂದರಿಂದ ರಾಷ್ಟ್ರವ್ಯಾಪಿ ಆರಂಭಿಸಲಾಗುತ್ತದೆ. ಮಾರಾಟಗಾರರಿಂದ ನೇರವಾಗಿ ಸಬ್ಸಿಡಿ ದರದಲ್ಲಿ ಸಿಲಿಂಡರ್‌ಗಳನ್ನು ಕುಟುಂಬಗಳು ಪಡೆಯಲು 2015, ಮಾರ್ಚ್ 31ರವರೆಗೆ  ಮೂರು ತಿಂಗಳ ಗ್ರೇಸ್ ಅವಧಿಯನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.

ಈ ದಿನಾಂಕದ ನಂತರ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರುಕಟ್ಟೆ ದರದಲ್ಲಿ ಮಾರಲಾಗುತ್ತದೆ. ಆ ಸಮಯದೊಳಗೆ ಗ್ರಾಹಕ ಸಬ್ಸಿಡಿ ವರ್ಗಾವಣೆ ಯೋಜನೆಗೆ ನೋಂದಣಿ ಮಾಡಿದರೆ ಸಬ್ಸಿಡಿಯನ್ನು ಅರ್ಜಿಯಲ್ಲಿ ನೀಡಲಾದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇಲ್ಲದಿದ್ದರೆ ಸಬ್ಸಿಡಿಯೇ ಸಿಗುವುದಿಲ್ಲ. 

ವೆಬ್ದುನಿಯಾವನ್ನು ಓದಿ