ಬೆಂಗಳೂರು-ರಾಮನಗರ ನಡುವೆ ಮೆಮು ರೈಲು ಸೇವೆ

ಮಂಗಳವಾರ, 17 ಜನವರಿ 2017 (10:52 IST)
ಕೆಎಸ್ಆರ್ ಬೆಂಗಳೂರು-ರಾಮನಗರ ರೈಲ್ವೆ ನಿಲ್ದಾಣದ ನಡುವೆ ಮೆಮು ಸೇವೆಗಳು ಹಾಗೂ ಬೆಂಗಳೂರು ಶಿವಮೊಗ್ಗ ನಗರದ ನಡುವೆ ಹೊಸ ಎಕ್ಸ್ ಪ್ರೆಸ್ ರೈಲು ಸೇವೆಗೆ ಚಾಲನೆ ನೀಡಲಾಗಿದೆ. ಬೈಯಪ್ಪನಹಳ್ಳಿಯಲ್ಲಿ ಹೊಸ ಕೋಚಿಂಗ್ ಟರ್ಮಿನಲ್ ಗೆ ಶಂಕುಸ್ಥಾಪನೆಯು ಈ ಸಂಧರ್ಭದಲ್ಲಿ ನೆರವೇರಿತು. 
 
ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರುಗಳು ಮುಖ್ಯಮಂತ್ರಿಗಳ ಜೊತೆಗೆ ಉಪಸ್ಥಿತರಿದ್ದರು. ಈ ರೈಲು ಯೋಜನೆಗೆ ರಾಜ್ಯ ಸರಕಾರ 50: 50ರ ಪ್ರಮಾಣದಲ್ಲಿ ಬಜೆಟ್ ಹೊಂದಾಣಿಕೆ ಮಾಡುವ ಪ್ರಸ್ತಾಪ ಇಟ್ಟಿದೆ. ಆದರೆ ಕೇಂದ್ರ ಸರಕಾರ ಇದಕ್ಕೆ ತಯಾರಿಲ್ಲ.
 
ರಾಜ್ಯ ಸರಕಾರಕ್ಕೂ ಹೊರಯಾಗಬಾರದು ಅದೇ ರೀತಿ ಕೇಂದ್ರಕ್ಕೂ ಹೊರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. ಮೇನ್ ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಮೆಮು) ರೈಲು ಸೇವೆಗಳನ್ನು ಇನ್ನಷ್ಟು ವಿಸ್ತರಿಸಲು ಚಿಂತನೆ ನಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ