ಅಮೆರಿಕಾದಲ್ಲಿ ಸ್ಮಾರ್ಟ್‌ಫೋನ್‌ನ್ನೇ ಬಾಳಸಂಗಾತಿಯಾಗಿ ವರಿಸಿದ ಮಹಾನುಭಾವ

ಗುರುವಾರ, 30 ಜೂನ್ 2016 (18:34 IST)
ಲಾಸ್ ಏಂಜಲೀಸ್ ಮೂಲದ ವ್ಯಕ್ತಿಯೊಬ್ಬ ತನ್ನ ಸ್ಮಾರ್ಟ್‌ಪೋನ್‌ನನ್ನು ವಿವಾಹವಾಗಿರುವ ಅಪರೂಪದ ಘಟನೆ ಲಾಸ್ ವೇಗಾಸ್‌ ಚರ್ಚ್‌ನ  ಸಮಾರಂಭದಲ್ಲಿ ನಡೆದಿದ್ದು, ಸ್ಮಾರ್ಟ್‌ಫೋನ್ ಬಗ್ಗೆ ಆತನಿಗಿರುವ ಪ್ರೀತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾನೆ.
 
ಕಲಾವಿದ ಮತ್ತು ನಿರ್ದೇಶಕನಾಗಿರುವ ಆರೋನ್ ಚೆರ್ವೆನಾಕ್, ಲಾಸ್ ಏಂಜಲೀಸ್‌ನಿಂದ 365 ಕಿಲೋಮೀಟರ್ ದೂರದಲ್ಲಿರುವ ಲಾಸ್‌ವೇಗಾಸ್‌ಗೆ ಡ್ರೈವ್ ಮಾಡಿಕೊಂಡು ಚರ್ಚ್‌ಗೆ ಆಗಮಿಸಿ ವಿವಾಹ ಸಮಾರಂಭದಲ್ಲಿ ಪಾಲ್ಘೊಂಡಿದ್ದರು ಎನ್ನಲಾಗಿದೆ.
 
ಸಾಮಾನ್ಯ. ವಿವಾಹಕ್ಕಿಂತ ಭಿನ್ನವಾದ ಸನ್ನಿವೇಶವೆಂದರೆ ವರನು ಸೂಟ್ ಧರಿಸಿದ್ದರೆ ಸ್ಮಾರ್ಟ್‌ಪೋನ್‌ಗೆ ಸುಂದರವಾದ ರಕ್ಷಣಾ ಕವಚದಿಂದ ಸಿಂಗರಿಸಲಾಗಿತ್ತು. 
 
ಆರನ್ ಚೆರ್ವೆನಾಕ್, ತಮ್ಮ ಸ್ಮಾರ್ಟ್‌ಪೋನ್‌ನ್ನೇ ಬಾಳ ಸಂಗಾತಿಯಾಗಿ ಮಾಡಿಕೊಂಡಿದ್ದು, ಮಡದಿಯನ್ನು ಅತಿ ಪ್ರೀತಿ, ಗೌರವ, ಸೌಕರ್ಯ ಮತ್ತು ನಂಬಿಕೆಯಿಂದ ನೋಡಿಕೊಳ್ಳುಬೇಕೆಂದು ಭರವಸೆ ನೀಡಿ ಎಂದು ಲಾಸ್ ವೆಗಾಸ್‌ನ ಲಿಟ್ಲ್ ಪ್ರಾರ್ಥನಾ ಮಂದಿರದ ಮಾಲೀಕ ಮೈಕೇಲ್ ಕೆಲ್ಲಿ, ವರನಿಗೆ ತಿಳಿಸಿದ್ದಾರೆ.
 
ಈ ವಿಚಿತ್ರ ವಿವಾಹಿತ ಜೋಡಿಗಳು ಸಾಕಷ್ಟು ವಿಶೇಷತೆಯನ್ನು ಹೊಂದಿದ್ದು, ಇಂತಹ ವಿಚಿತ್ರ ವಿವಾಹವನ್ನು ಇದೆ ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ಮೈಕೇಲ್ ಕೆಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
 
ಜನ ಸಾಮಾನ್ಯರು ತಮ್ಮ ದೈನಂದಿನ ಜೀವನದಲ್ಲಿ ಸ್ಮಾರ್ಟ್‌ಪೋನ್‌ಗಳನ್ನು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದಾರೆ ಎಂಬುದನ್ನು ಸಾರುವ ಉದ್ದೇಶದಿಂದ ಆರನ್ ಚೆರ್ವೆನಾಕ್ ತನ್ನ ಸ್ಮಾರ್ಟ್‌ಪೋನ್‌ನ್ನೇ ವಿವಾಹವಾಗಿದ್ದಾನೆಂದು ಮೈಕೇಲ್ ಕೆಲ್ಲಿ ಸ್ಪಷ್ಟಪಡಿಸಿದ್ದಾರೆ.
 
ಆಧುನಿಕ ಜೀವನ ಶೈಲಿಯಲ್ಲಿ ಬಳಕೆದಾರರು ಎಷ್ಟರ ಮಟ್ಟಿಗೆ ಸ್ಮಾರ್ಟ್‌ಪೋನ್‌ಗಳಿಗೆ ಮಾರುಹೊಗಿದ್ದಾರೆಂದರೆ, ಸ್ಮಾರ್ಟ್‌ಪೋನ್‌ನೊಂದಿಗೆ ಮಲಗಿ ಸ್ಮಾರ್ಟ್‌ಪೋನ್‌ನೊಂದಿಗೆ ಎದ್ದೇಳುತ್ತಿದ್ದಾರೆ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ