ಆಫ್ರಿಕಾ ರಾಷ್ಟ್ರಗಳ ಪ್ರವಾಸದಲ್ಲಿರುವ ಫೇಸ್‌ಬುಕ್ ಮಾಲೀಕ ಮಾರ್ಕ್ ಜ್ಯೂಕರ್‌ಬರ್ಗ್

ಗುರುವಾರ, 1 ಸೆಪ್ಟಂಬರ್ 2016 (16:50 IST)
ರೋಮ್ ದೇಶದ ಪೋಪ್ ಭೇಟಿಯ ನಂತರ, ಫೇಸ್‌ಬುಕ್ ಸಂಸ್ಥಾಪಕ ಹಾಗೂ ಸಿಇಓ ಮಾರ್ಕ್ ಜ್ಯೂಕರ್‌ರ್ಬರ್ಗ್ ಅವರು ಆಫ್ರಿಕನ್ ದೇಶಗಳಲ್ಲೇ ಅತೀ ದೊಡ್ಡ ಸಾಮಾಜಿಕ ಜಾಲತಾಣಗಳ ಮಾರುಕಟ್ಟೆ ಹೊಂದಿರುವ ನೈಜೇರಿಯಾ ದೇಶ ತಲುಪಿದ್ದಾರೆ. 
 
ಆಫ್ರಿಕಾ ಖಂಡದಲ್ಲೇ ಪ್ರಬಲ ಫೇಸ್‌ಬುಕ್ ಬಳಕೆದಾರರನ್ನು ಹೊಂದಿರುವ ನೈಜೇರಿಯಾದಲ್ಲಿ ಪ್ರತಿ ತಿಂಗಳು 16 ಲಕ್ಷ ಜನರು ಸಾಮಾಜಿಕ ಜಾಲತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. 
 
ಮಾರ್ಕ್ ಜ್ಯೂಕರ್‌ಬರ್ಗ್ ಪ್ರಕಾರ, ಲಾಗೋಸ್ ನಗರದಲ್ಲಿ ಇರುವಷ್ಟು ಸಮಯದಲ್ಲಿ ಡೆವಲಪರ್ಸ್‌ಗಳನ್ನು ಹಾಗೂ ಉದ್ಯಮಿಗಳನ್ನು ಭೇಟಿ ಮಾಡಿ, ಅವರಿಂದ ನೈಜೀರಿಯಾದ ಸ್ಟಾರ್ಟ್‌ಅಪ್ ಇಕೋಸಿಸ್ಟಮ್ ಕುರಿತು ಮಾಹಿತ ಪಡೆದುಕೊಳ್ಳಲಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿದೆ. 
 
ಮಾರ್ಕ್ ಜ್ಯೂಕರ್‌ಬರ್ಗ್ ಅವರು, ಸಿಸಿ ಹಬ್‌ನಲ್ಲಿರುವ ಸಮರ್ ಕೋಡಿಂಗ್ ಶಿಬಿರದಲ್ಲಿ ಹಾಜರಾಗುವ ಮಕ್ಕಳನ್ನು ಭೇಟಿ ಮಾಡಿದರು. 
 
ವರದಿಗಳ ಪ್ರಕಾರ, ಮಾರ್ಕ್ ಜ್ಯೂಕರ್‌ಬರ್ಗ್ ಅವರು ನೈಜೀರಿಯಾದ ಅಧ್ಯಕ್ಷ ಮುಹಮ್ಮದು ಬುಹಾರಿ ಹಾಗೂ ಉಪಾಧ್ಯಕ್ಷ ಯೆಮೆ ಒಸಿನ್ಬಾಜೊ ಅವರನ್ನು ಭೇಟಿ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ