ಜುಲೈನಲ್ಲಿ ಮಾರುತಿ ಕಾರುಗಳ ಮಾರಾಟ ಶೇ. 20ರಷ್ಟು ಹೆಚ್ಚಳ

ಶನಿವಾರ, 1 ಆಗಸ್ಟ್ 2015 (17:06 IST)
ದೇಶದ ಅತೀ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ  ಜುಲೈನಲ್ಲಿ ಒಟ್ಟು ಮಾರಾಟದಲ್ಲಿ ಶೇ. 20.1ರಷ್ಟು ಹೆಚ್ಚಳ ದಾಖಲಿಸಿದ್ದು, ಅದರ ಒಟ್ಟು ಮಾರಾಟ ಜುಲೈನಲ್ಲಿ 1,21,712 ಕಾರುಗಳನ್ನು ಮುಟ್ಟಿದೆ. ಕಳೆದ ತಿಂಗಳು ಅದರ ಸ್ಥಳೀಯ ಮಾರಾಟಗಳು ಶೇ. 22.5 ರಷ್ಟು ಹೆಚ್ಚಳವಾಗಿದ್ದು, 1,10, 380 ಕಾರುಗಳನ್ನು ತಲುಪಿತ್ತು. ಕಳೆದ ವರ್ಷದ ಜುಲೈನಲ್ಲಿ 90,  093 ಕಾರುಗಳು ಮಾರಾಟವಾಗಿತ್ತು. 
 
ಮಿನಿ ವಿಭಾಗದ ಕಾರುಗಳಾದ ಆಲ್ಟೋ ಮತ್ತು ವ್ಯಾಗನ್ ಆರ್ ಶೇ. 31.3 ಹೆಚ್ಚಳವಾಗಿ 37, 752 ಯೂನಿಟ್‌ಗಳ ಮಾರಾಟವಾಗಿದೆ.  ಸ್ವಿಫ್ಟ್, ಎಸ್ಟಿಲೋ, ರಿಟ್ಜ್, ಡಿಜೈರ್ ಶೇ. 13.9ರಷ್ಟು ಮಾರಾಟ ಜುಲೈನಲ್ಲಿ  ಹೆಚ್ಚಳವಾಗಿ 48, 381 ಯೂನಿಟ್‌ಗಳನ್ನು ಮುಟ್ಟಿದೆ.

ಕಳೆದ ವರ್ಷ ಇದರ ಮಾರಾಟ 42, 491 ಯೂನಿಟ್‌ಗಳಾಗಿತ್ತು. ಕಾಂಪ್ಯಾಕ್ಟ್ ಸೆಡಾನ್ ಡಿಜೈರ್ ಟೂರ್ ಮಾರಾಟ ಎರಡು ಪಟ್ಟು ಹೆಚ್ಚಾಗಿದ್ದು ಕಳೆದ ಜುಲೈನಲ್ಲಿ 1299 ಕಾರುಗಳು ಮಾರಾಟವಾಗಿದ್ದರೆ ಈ ಬಾರಿ 3370 ಕಾರುಗಳು ಮಾರಾಟವಾಗಿವೆ. 
 
ಸೆಡಾನ್ ಸಿಯಾಜ್ 2099 ಕಾರುಗಳು ಮಾರಾಟವಾಗಿವೆ. ಜಿಪ್ಸಿ, ಗ್ರಾಂಡ್ ವಿಟಾರಾ ಮತ್ತು ಎರ್ಟಿಗಾ ಕಾರುಗಳು ಶೇ. 22.8 ಬೆಳವಣಿಗೆ ಸಾಧಿಸಿದ್ದು, ಜುಲೈನಲ್ಲಿ 6916 ಕಾರುಗಳು ಮಾರಾಟವಾಗಿವೆ. 
 

ವೆಬ್ದುನಿಯಾವನ್ನು ಓದಿ