ಆನ್‌ಲೈನ್ ಔಷಧ ಮಾರಾಟ ವಿರೋಧಿಸಿ ನಾಳೆ ಔಷಧಿ ಅಂಗಡಿಗಳು ಬಂದ್

ಮಂಗಳವಾರ, 13 ಅಕ್ಟೋಬರ್ 2015 (18:22 IST)
ಇಂದು ಮಧ್ಯರಾತ್ರಿಯಿಂದ ದೇಶವ್ಯಾಪಿ ಔಷಧ ಅಂಗಡಿಗಳು ಬಂದ್ ಆಗಲಿವೆ. ಆನ್ ಲೈನ್ ಮೂಲಕ ಔಷಧಿ ಮಾರಾಟಕ್ಕೆ ವಿರೋಧಿಸಿ ರಾಷ್ಟ್ರವ್ಯಾಪಿ ಔಷಧ ಅಂಗಡಿಗಳು ಪ್ರತಿಭಟನೆ ನಡೆಸಿರುವುದರಿಂದ ಬೆಂಗಳೂರಿನಲ್ಲಿ ಇಂದು  ಮಧ್ಯರಾತ್ರಿಯಿಂದ 8000 ಔಷಧ ಅಂಗಡಿಗಳು ಬಂದ್ ಆಗಲಿವೆ. ಸರ್ಕಾರಿ ಖಾಸಗಿ ಆಸ್ಪತ್ರೆ ಔಷಧಿ ಮಳಿಗೆಗಳಿಗೆ ಮಾತ್ರ ರಿಯಾಯ್ತಿ ನೀಡಲಾಗಿದೆ.

ಆನ್‌ಲೈನ್ ಔಷಧ ಮಾರಾಟ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು.  ಇಂತಹ ಔಷಧಿ ಕಂಪನಿಗಳು ಮತ್ತು ಮಾರಾಟ ಮಾಡುವವರಿಗೆ ನಿಷೇಧ ವಿಧಿಸಿ ಎಂದು ಅವು ಒತ್ತಾಯಿಸಿವೆ.  ಆಲ್ ಇಂಡಿಯಾ ಔಷಧಿ ಸಂಘಟನೆ ಈ ಬಂದ್‌ಗೆ ಕರೆ ಕೊಟ್ಟಿದ್ದು, ಈ ಬಂದ್ ಬಿಸಿ ಆಸ್ಪತ್ರೆಯ ಔಷಧಿ ಅಂಗಡಿಗಳಿಗೆ ತಟ್ಟುವುದಿಲ್ಲ.  ಆನ್ಲೈನ್‌ನಲ್ಲಿ ಔಷಧ ಮಾರಾಟಕ್ಕೆ ಅನುಮತಿ ನೀಡುವುದರಿಂದ ನಕಲಿ ಕಂಪನಿಗಳ ಔಷಧಿಗಳು ಮಾರಾಟವಾಗುವುದರಿಂದ ಇದು ದಂಧೆಯಾಗಿ ಬದಲಾಗುತ್ತದೆ.

ಆದ್ದರಿಂದ ಇವುಗಳ ಮಾರಾಟ ನಿಷೇಧಿಸಬೇಕೆಂದು ಅವು ಆಗ್ರಹಿಸಿವೆ.  ಇಂತಹ ಔಷಧ ತೆಗೆದುಕೊಂಡರೆ ನರಮಂಡಲ ಹಾಳಾಗುತ್ತೆ.  ಇಂತಹ ಔಷಧ ಕಂಪನಿಗಳು ಮತ್ತು ಮಾರುವವರನ್ನು ನಿಷೇಧಿಸಿ ಎಂದು ಔಷಧಿ ಅಂಗಡಿಗಳ ಸಂಸ್ಥೆ ಸಚಿವ ಖಾದರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. 

ವೆಬ್ದುನಿಯಾವನ್ನು ಓದಿ