ಭಾರತದ ಮಾರುಕಟ್ಟೆಯಲ್ಲಿ 10.5 ಕೋಟಿ ಬೆಲೆಯ ಮರ್ಸಿಡಿಸ್ ಮೇಬ್ಯಾಚ್ ಎಸ್600 ಗಾರ್ಡ್

ಬುಧವಾರ, 9 ಮಾರ್ಚ್ 2016 (19:17 IST)
ನವದೆಹಲಿ: ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಿಕಾ ಸಂಸ್ಥೆ ಮರ್ಸಿಡಿಸ್ ಬೆಂಝ್, ಮಂಗಳವಾರ ಮೇಬ್ಯಾಚ್ ಎಸ್600 ಗಾರ್ಡ್ ಮಾದರಿಯ ಕಾರುಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ದೆಹಲಿ ಶೋ ರೂಮ್ ಬೆಲೆ ಹೊರತು ಪಡಿಸಿ, ಈ ಕಾರುಗಳ ಬೆಲೆ 10.5 ಕೋಟಿ ರೂಪಾಯಿ.
ಮೇಬ್ಯಾಚ್ ಎಸ್600 ಗಾರ್ಡ್ ಕಾರುಗಳು, ವಿಆರ್ 10 ಪ್ರಮಾಣಿತ ಅತಿ ಹೆಚ್ಚು ಬ್ಯಾಲಿಸ್ಟಿಕ್ ಪ್ರೊಟೆಕ್ಷನ್ ಹೊಂದಿರುವ ಪ್ರಮಾಣಪತ್ರ ಪಡೆದಿದ್ದು, ಸಂಪೂರ್ಣ ಸಿದ್ಧ ಸ್ಥಿತಿಯಲ್ಲಿ ಭಾರತಕ್ಕೆ ಕಾಲಿಟ್ಟಿದೆ. 
 
"ಹೋಲಿಕೆಯಿಲ್ಲದ ಮರ್ಸಿಡಿಸ್ ಮೇಬ್ಯಾಚ್ ಎಸ್ 600 ಗಾರ್ಡ್ ಕಾರುಗಳನ್ನು ಪರಿಚಯಿಸುವುದರೊಂದಿಗೆ, ವಿಶೇಷ ರಕ್ಷಣಾ ವಾಹನಗಳ ಕ್ಷೇತ್ರದಲ್ಲಿ ನಮ್ಮ ತಂತ್ರಜ್ಞಾನ ನಾಯಕತ್ವವನ್ನು ನಾವು ಬಲವಾಗಿ ಪುನರುಚ್ಛರಿಸಿದ್ದೇವೆ ಎಂದು ಭಾರತದ ಮರ್ಸಿಡಿಸ್ ಸಂಸ್ಥೆಯ ಮುಖ್ಯಸ್ಥ ರೋಲಾಂಡೆ ಫೊಲ್ಗರ್ ತಿಳಿಸಿದ್ದಾರೆ. 
 
ವಿಆರ್ 10 ಪ್ರಮಾಣಿತ ಗೈಡ್‌ಲೈನ್ಸ್ ಪ್ರಕಾರ ಕಾರಿನ ಬಾಡಿ ಮತ್ತು ವಿಂಡೋಗಳು ಗುಂಡು ನಿರೋಧಕ ಸಾಮರ್ಥ್ಯದ ಗಟ್ಟಿಯಾದ ಉಕ್ಕಿನ ಕೋರ್‌ಗಳನ್ನು ಹೊಂದಿರಬೇಕು. ಮೇಬ್ಯಾಚ್ ಎಸ್600 ಗಾರ್ಡ್ ಕಾರುಗಳು ಕಾರುಗಳು ಬ್ಯಾಲಿಸ್ಟಿಕ್ ಮತ್ತು ಬ್ಲಾಸ್ಟ್ ಪ್ರೊಟೆಕ್ಷನ್ ತಂತ್ರಜ್ಞಾನ ಹೊಂದಿದೆ.

ವೆಬ್ದುನಿಯಾವನ್ನು ಓದಿ