ಮೈಕ್ರೋಮ್ಯಾಕ್ಸ್ ಕಾನ್‌ವಾಸ್ 6 ಪ್ರೊ ಸ್ಮಾರ್ಟ್‌ಫೋನ್ ನಾಳೆ ಮಾರುಕಟ್ಟೆಗೆ ಬಿಡುಗಡೆ

ಮಂಗಳವಾರ, 19 ಏಪ್ರಿಲ್ 2016 (20:12 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಮೈಕ್ರೋಮ್ಯಾಕ್ಸ್, ಹೊಸ ಆವೃತ್ತಿಯ ಕಾನ್‌ವಾಸ್ 6 ಪ್ರೊ ಪೋನ್‌ಗಳನ್ನು ನಾಳೆ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಕಾನ್‌ವಾಸ್ 6 ಪ್ರೊ ಆವೃತ್ತಿಯ ಪೋನ್‌ಗಳು ಕಳೆದ ವಾರವಷ್ಟೇ ಅನಾವರಣಗೊಂಡಿದ್ದು, ಮಾರುಕಟ್ಟೆಯಲ್ಲಿ ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳ ಬೆಲೆ 13,999 ರೂಪಾಯಿ ಆಗಿದೆ.
 
ಮೈಕ್ರೋಮ್ಯಾಕ್ಸ್ ಕಾನ್‌ವಾಸ್-6 ಪ್ರೋ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 5.5 ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇ, 64-ಬಿಟ್ ಮೀಡಿಯಾ ಟೆಕ್ ಎಮ್‌ಟಿ6795ಎಮ್, 4 ಜಿಬಿ ರ್ಯಾಮ್ ಜೊತೆಗೆ ಟ್ರು ಆಕ್ಟಾ ಕೋರ್ 2.0ಜಿಎಚ್‌ಝಡ್ ಎಸ್‌ಒಸಿ ವೈಶಿಷ್ಟ್ಯವನ್ನು ಹೊಂದಿದೆ.
 
ಕಾನ್‌ವಾಸ್-6 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳಂತೆ, ಈ ಆವೃತ್ತಿಯ ಪೋನ್‌ಗಳ 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
 
ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 13 ಮೆಗಾ ಪಿಕ್ಸೆಲ್ ಹೊಂದಿರುವ ರಿಯರ್ ಕ್ಯಾಮೆರಾ ಜೊತೆಗೆ 5 ಮೆಗಾ ಪಿಕ್ಸೆಲ್‌ನ ಫ್ರಂಟ್ ಕ್ಯಾಮೆರಾ ಹೊಂದಿದ್ದು, 3000ಎಮ್‌ಎಎಚ್ ಬ್ಯಾಟರಿಯನ್ನು ಹೊಂದಿದೆ.
 
ಗ್ರಾಹಕರು ಈ ಆವೃತ್ತಿಯ ಪೋನ್‌ಗಳನ್ನು ಬುಕ್ ಮಾಡಲು, ಸಂಸ್ಥೆಯ ಅಧಿಕೃತ ಮಾರಾಟ ಮಳಿಗೆಯಲ್ಲಿ ಒಂದು ಸಾವಿರ ಮುಂಗಡ ಹಣ ಪಾವತಿ ಮಾಡಿ ಬುಕ್ ಮಾಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ