ಐಐಟಿ ಕಾನ್ಪುರ್ ವಿದ್ಯಾರ್ಥಿಗೆ ಒಂದೂವರೆ ಕೋಟಿ ವೇತನ

ಸೋಮವಾರ, 5 ಡಿಸೆಂಬರ್ 2016 (11:59 IST)
ಐಐಟಿ ಕಾನ್ಪುರ್ ವಿದ್ಯಾರ್ಥಿಗೆ ಮೈಕ್ರೋಸಾಫ್ಟ್ ಭಾರಿ ಮೊತ್ತದ ವೇತನದೊಂದಿಗೆ ಉದ್ಯೋಗವಕಾಶ ಕೊಟ್ಟಿದೆ. ಅಮೆರಿಕಾದಲ್ಲಿರುವ ರೆಡ್‍ಮಂಡಲ್‌ನಲ್ಲಿರುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಈ ವಿದ್ಯಾರ್ಥಿಗೆ ವರ್ಷಕ್ಕೆ ಸುಮಾರು ರೂ.1.50 ಕೋಟಿ ವೇತನ ನೀಡಲಿದ್ದಾರೆ.
 
ಮೂಲ ವೇತನ ರೂ. 94 ಲಕ್ಷದ ಜೊತೆಗೆ ವಿದೇಶದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ವೀಸಾ ಭತ್ಯೆ ಸೇರಿದಂತೆ ಇತರೆ ಭತ್ಯೆಗಳು ಸುಮಾರು 47.60 ಲಕ್ಷ (70,00 ಡಾಲರ್) ಕೊಡಲಿದ್ದಾರೆ. ಐಐಟಿ ಕಾನ್ಪುರ್ ಕ್ಯಾಂಪಸ್ ಆಯ್ಕೆಯಲ್ಲಿ ಕೊಡುತ್ತಿರುವ ಇದುವರೆಗಿನ ಅತ್ಯಧಿಕ ವೇತನ ಇದು. 
 
ಈ ಹಿಂದೆ ಒಬ್ಬ ವಿದ್ಯಾರ್ಥಿಗೆ ರೂ. 93 ಲಕ್ಷ ವೇತನ ನೀಡಲಾಗಿತ್ತು. ಆದರೆ ಆ ವಿದ್ಯಾರ್ಥಿ ಹೆಸರು ಹೇಳಲು ಇಚ್ಛಿಸಿಲ್ಲ. ಆದರೆ ಮನಸ್ಸಿಗೆ ತುಂಬಾ ಸಂತೋಷ ಆಗಿದೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ವಿವರ ನೀಡಲು ನೇಮಕಾತಿ ಅಧಿಕಾರಿ ಆಚಾರ್ಯ ಶ್ಯಾಮ್ ನಾಯರ್ ನಿರಾಕರಿಸಿದ್ದಾರೆ. 
 
ದೇಶೀಯ ಮತ್ತು ವಿದೇಶದ ಅಗತ್ಯಕ್ಕೆ ಅನುಗುಣವಾಗಿ ಈ ವರ್ಷ 70 ಮಂದಿಗೂ ಹೆಚ್ಚು ಐಐಟಿ ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿದ್ದಾಗಿ ಸಂಸ್ಥೆ ಪ್ರಕಟಿಸಿದೆ. ಇವರಿಗೆ ನೇಮಕಾತಿ ಪತ್ರಗಳನ್ನು ಕೊಟ್ಟಿರುವುದಾಗಿ ಮೈಕ್ರೋಸಾಫ್ಟ್ ಇಂಡಿಯಾ ಹಿರಿಯ ನಿರ್ದೇಶಕ (ಮಾನವ ಸಂಪನ್ಮೂಲ) ರೋಹಿತ್ ಠಾಕೂರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ