ಕೇಂದ್ರ ಬಜೆಟ್: ಮದ್ಯಮವರ್ಗಕ್ಕೆ ನಿರಾಶೆ, ಕಾರ್ಪೊರೇಟ್‌ಗಳಿಗೆ ಮಣೆ

ಶನಿವಾರ, 28 ಫೆಬ್ರವರಿ 2015 (16:03 IST)
ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಪೂರ್ಣಾವಧಿ ಬಜೆಟ್‌ನಲ್ಲಿ ಮಧ್ಯಮವರ್ಗದ ಜನರಿಗೆ ಯಾವುದೇ ತೆರಿಗೆ ವಿನಾಯಿತಿ ನೀಡದೇ ಲಕ್ಷಾಂತರ ಜನರಿಗೆ ನಿರಾಶೆ ಮೂಡಿಸಿದ್ದಾರೆ. ಪ್ರಸ್ತುತ ರೂ. 2.50 ಲಕ್ಷ ವಾರ್ಷಿಕ ಆದಾಯವರೆಗೆ ತೆರಿಗೆ ಇಲ್ಲ. ಆದಾಗ್ಯೂ, ಆರೋಗ್ಯ ವಿಮೆ ಪ್ರೀಮಿಯಂ ಕಡಿತವನ್ನು 15,000ದಿಂದ 25,000ಕ್ಕೆ ಹೆಚ್ಚಿಸುವ ಪ್ರಸ್ತಾಪದ ಮೂಲಕ ಮತ್ತು ಪ್ರಯಾಣ ಭತ್ಯೆಯನ್ನು ಮಾಸಿಕ 800ರಿಂದ 1600 ರೂ.ಗೆ ಹೆಚ್ಚಿಸುವ ಮೂಲಕ ವೇತನವರ್ಗಕ್ಕೆ ಸ್ವಲ್ಪ ಮಟ್ಟಿನ ಪರಿಹಾರ ನೀಡಿದ್ದಾರೆ.

ಆದರೆ ಸೇವಾ ತೆರಿಗೆ ಮತ್ತು ಶಿಕ್ಷಣ ಸೆಸ್‌ನಲ್ಲಿ ಉದ್ದೇಶಿತ ಶೇ. 12ರಿಂದ ಶೇ. 14ಕ್ಕೆ ಏರಿಕೆಯಿಂದ ಅನೇಕ ಸೇವೆಗಳು ದುಬಾರಿಯಾಗಲಿವೆ. ಫೋನ್ ಕರೆಗಳು, ಹೊಟೆಲ್‌ನಲ್ಲಿ ಆಹಾರ ಸೇವನೆ ದುಬಾರಿಯಾಗಲಿದೆ.ಸಿಗರೇಟ್ ಮೇಲಿನ ಅಬ್ಕಾರಿ ಸುಂಕವನ್ನು ಶೇ. 25ಕ್ಕೆ ಹೆಚ್ಚಿಸುವ ಮೂಲಕ ಮತ್ತಷ್ಟು ದುಬಾರಿಯಾಗಿದೆ.

ಸಂಪತ್ತು ತೆರಿಗೆಯನ್ನು ರದ್ದು ಮಾಡಿರುವ ಜೇಟ್ಲಿ ವರ್ಷಕ್ಕೆ ಒಂದು ಕೋಟಿಗಿಂತ ಹೆಚ್ಚು ಸಂಪಾದನೆ ಮಾಡುವವರಿಗೆ ಶೇ. 2ರಷ್ಟು ಸರ್ಜಾರ್ಜ್ ವಿಧಿಸಿದ್ದಾರೆ.ಏತನ್ಮಧ್ಯೆ ಹಣಕಾಸು ಸಚಿವರು ಕಾರ್ಪೊರೇಟ್ ತೆರಿಗೆಯನ್ನು ಶೇ. 30ರಿಂದ ಶೇ. 25ಕ್ಕೆ ತಗ್ಗಿಸಿದ್ದಾರೆ. ಇದು ವೆಚ್ಚವನ್ನು ಉತ್ತೇಜಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ