ಬಂಡವಾಳ ಹಿಂತೆಗೆತದಲ್ಲಿ ಹೊಸ ದಾಖಲೆ ನಿರ್ಮಿಸಿದ ಮೋದಿ ಸರ್ಕಾರ

ಶನಿವಾರ, 31 ಜನವರಿ 2015 (10:10 IST)
ಕೋಲ್ ಇಂಡಿಯಾದ ಯಶಸ್ವಿ ಷೇರು ಮಾರಾಟದ ಬಳಿಕ ನರೇಂದ್ರ ಮೋದಿ ಸರ್ಕಾರ ಅತ್ಯಧಿಕ ಬಂಡವಾಳ ಹಿಂತೆಗೆತ ಚಟುವಟಿಕೆ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸಿದೆ. ಆದರೆ ಸರ್ಕಾರ ಇನ್ನಷ್ಟು ಹೆಚ್ಚಿನ ಗುರಿಯನ್ನು ಹಾಕಿಕೊಂಡಿದೆ.

ಕೋಲ್ ಇಂಡಿಯಾದಲ್ಲಿ ಶೇ. 10 ಷೇರುಗಳ ಮಾರಾಟದಿಂದ ಸರ್ಕಾರಕ್ಕೆ 22,557,63 ಕೋಟಿ ತಂದುಕೊಡುತ್ತದೆ. ಅತ್ಯಂತ ದೊಡ್ಡ ಪ್ರಮಾಣದ ಷೇರುಗಳ ಮಾರಾಟದಲ್ಲಿ ಸರ್ಕಾರ ಕೋಲ್ ಇಂಡಿಯಾದ 63.16 ಕೋಟಿ ಷೇರುಗಳ ಮಾರಾಟದ ಆಫರ್ ನೀಡಿತ್ತು. ಆದರೆ ಹೂಡಿಕೆದಾರರು 67.52 ಕೋಟಿ ಷೇರುಗಳಿಗೆ ಬಿಡ್ಡಿಂಗ್ ಮಾಡಿದ್ದರಿಂದ ಹೆಚ್ಚಿನ ಬೇಡಿಕೆ ಉಂಟಾಗಿದೆ.

ಕೋಲ್ ಇಂಡಿಯಾ ಷೇರು ಮಾರಾಟಕ್ಕೆ ಮುಂಚಿತವಾಗಿ, ಸರ್ಕಾರ ಉಕ್ಕು ತಯಾರಿಕೆ ಸಂಸ್ಥೆ ಸೈಲ್‌ನ ಷೇರುಗಳ ಮಾರಾಟದಿಂದ 1715 ಕೋಟಿ ರೂ. ಸಂಗ್ರಹಿಸಿತ್ತು. ಇಲ್ಲಿಯವರೆಗೆ ಅತ್ಯಧಿಕ ಬಂಡವಾಳ ಹಿಂತೆಗೆತ ಸಂಗ್ರಹವು 2012-13ರಲ್ಲಿ 23,956 ಕೋಟಿಯಾಗಿತ್ತು.

ಈ ವರ್ಷ ಸರ್ಕಾರ ಅತ್ಯಧಿಕ ಬಂಡವಾಳ ಹಿಂತೆಗೆತ ಸಂಗ್ರಹವನ್ನು ಮಾಡಲಿದೆ ಎಂದು ಬಂಡವಾಳ ಹಿಂತೆಗೆತ ಕಾರ್ಯದರ್ಶಿ ಆರಾಧನಾ ಜೊಹ್ರಿ ವಿಶ್ವಾಸ ವ್ಯಕ್ತಪಡಿಸಿದರು. ಈ ವಿತ್ತೀಯ ವರ್ಷದಲ್ಲಿ ಇನ್ನೂ ಕೆಲವು ಆಫರ್‌ಗಳನ್ನು ಮಾಡಲಾಗುವುದು ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ