ಕೇಂದ್ರದ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು ಏರಿಸಿದ ಮೋದಿ

ಮಂಗಳವಾರ, 24 ಫೆಬ್ರವರಿ 2015 (15:32 IST)
ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು ಶೇ. 32 ರಿಂದ 42ಕ್ಕೆ ಹೆಚ್ಚಿಸಲು ಹಣಕಾಸು ಆಯೋಗ ಸಲಹೆ ಮಾಡಿದ್ದು, ಹೆಚ್ಚಿದ ವಿಕೇಂದ್ರೀಕರಣದಿಂದಾಗಿ ರಾಜ್ಯಗಳು 3.48 ಲಕ್ಷ ಕೋಟಿಯನ್ನು 2014-15ರ ಸಾಲಿಗೆ ಮತ್ತು 2015-16ರ ಸಾಲಿಗೆ 5.26 ಲಕ್ಷ ಕೋಟಿ ರೂ.ಗಳನ್ನು ಪಡೆಯಲಿವೆ. 
 
 ಹೆಚ್ಚಿದ ತೆರಿಗೆ ವಿಕೇಂದ್ರಿಕರಣದಿಂದ ರಾಜ್ಯಗಳಿಗೆ ಯೋಜನೆಗಳ ಹಣಕಾಸು ಮತ್ತು ವಿನ್ಯಾಸದಲ್ಲಿ ಹೆಚ್ಚಿನ ಸ್ವಾಯತ್ತತೆ ಸಿಗುತ್ತದೆ ಎಂದು ವರದಿ ಹೇಳಿದೆ. 14ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಒಪ್ಪಿರುವ ನರೇಂದ್ರ ಮೋದಿ ಎಲ್ಲಾ ರಾಜ್ಯಸರ್ಕಾರಗಳಿಗೆ ಪತ್ರ ಬರೆದಿದ್ದು, ರಾಜ್ಯಗಳಿಗೆ ಗರಿಷ್ಠ ಹಣ ವಿಕೇಂದ್ರೀಕರಣಕ್ಕೆ ಕೇಂದ್ರ ನಿರ್ಧರಿಸಿದ್ದು, ರಾಜ್ಯಗಳ ಅಭಿವೃದ್ಧಿಗೆ ಯೋಜನೆ ರೂಪಿಸುವ ಸ್ವಾತಂತ್ರ್ಯಕ್ಕೆ ಅವುಗಳಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಗಳ ಒಕ್ಕೂಟ ವ್ಯವಸ್ಥೆ ಬಲಪಡಿಸಲು ಮತ್ತು ಸಹಕಾರಿ ಒಕ್ಕೂಟವ್ಯವಸ್ಥೆಗೆ ಉತ್ತೇಜನ ನೀಡಲು ಕೇಂದ್ರ ಕಾರ್ಯಪ್ರವೃತ್ತವಾಗಿದೆ.ಪ್ರಬಲ ರಾಜ್ಯಗಳು ಪ್ರಬಲ ಭಾರತದ ಅಡಿಪಾಯವಾಗಿದ್ದು, ರಾಜ್ಯಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂದು ಮೋದಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ