ಮೋಟೋದಿಂದ ಇನ್ನೆರಡು ಸ್ಮಾರ್ಟ್‍ಫೋನ್‌ಗಳು

ಬುಧವಾರ, 8 ಮಾರ್ಚ್ 2017 (12:08 IST)
ಭಾರತೀಯ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಮೋಟೋಗಿರುವ ಆಕರ್ಷಣೆ ಏನು ಅಂತ ಬಿಡಿಸಿ ಹೇಳಬೇಕಾಗಿಲ್ಲ. ಹೊಚ್ಚ ಹೊಸ ಮಾಡೆಲ್‌ಗಳೊಂದಿಗೆ ಗ್ರಾಹಕರಿಗೆ ಹೊಸ ಅನುಭವ ನೀಡುತ್ತಿರುವ ಮೋಟೋದಿಂದ ಇನ್ನೆರಡು ಹೊಸ ಸ್ಮಾರ್ಟ್‌ಫೋನ್‌ಗಳು ಬರಲಿವೆ.
 
ಮಾರ್ಚ್ 15ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಕ್ಲೂಸೀವ್ ಆಗಿ ಈ ಮಾಡೆಲ್‌ಗಳು ಲಭ್ಯವಾಗಲಿವೆ. ಮೋಟೋ ಜಿ5, ಮೋಟೋ ಜಿ5 ಪ್ಲಸ್ ಮಾಡೆಲ್‌ಗಲನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ಕಂಪೆನಿ ತಿಳಿಸಿದೆ.
 
ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2017ರ ಸಮಾವೇಶದಲ್ಲಿ ಈ ಎರಡು ಮಾಡೆಲ್‌ಗಳನ್ನು ಪ್ರದರ್ಶಿಸಿದ್ದರು. ಈ ಎರಡು ಮಾಡೆಲ್‌ಗಳು ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತವೆ ಎಂದು ಕಂಪೆನಿ ಭಾವಿಸಿದೆ. 
 
ಮೋಟೋ ಜಿ5 ವಿಶೇಷತೆಗಳು
* ಬೆಲೆ: ರೂ14,054
* 5 ಇಂಚಿನ ಪರದೆ
* 1080 ಪಿಕ್ಸೆಲ್ ರೆಸಲ್ಯೂಷನ್
* ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 430 ಪ್ರೋಸೆಸರ್
* 2/3 ಜಿಬಿ ರ‍್ಯಾಮ್ (ರ‍್ಯಾಮ್ ವಿಚಾರದಲ್ಲಿ ಸ್ಪಷ್ಟತೆ ಇಲ್ಲ)
* 16/32 ಜಿಬಿ ಇಂಟರ್‌ನಲ್ ಮೆಮೊರಿ
* 13 ಮೆಗಾಪಿಕ್ಸೆಲ್ ಕ್ಯಾಮೆರಾ
* 5 ಮೆಗಾಪಿಕ್ಸೆಲ್ ಮುಂಬರಿ ಕ್ಯಾಮೆರಾ
* 2800 ಎಂಎಎಚ್ ಬ್ಯಾಟರಿ ಸಾಮರ್ಥ್ಯ
 
 
ಮೋಟೋ ಜಿ5 ಪ್ಲಸ್ ವಿಶೇಷತೆಗಳು
ಬೆಲೆ: ರೂ 15,275
* 5.2 ಇಂಚಿನ ಪರದೆ
* 1080 ಪಿಕ್ಸೆಲ್ ರೆಸಲೂಷನ್
* ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 625
* 16/32 ಜಿಬಿ ಆಂತರಿಕ ಮೆಮೊರಿ
* 2/4 ಜಿಬಿ ರ‍್ಯಾಮ್
* 3000 ಎಂಎಎಚ್ ಬ್ಯಾಟರಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ