ಸ್ಮಾರ್ಟ್ಪೋನ್ ತಯಾರಿಕಾ ಸಂಸ್ಥೆಯಾಗಿರುವ ಮೋಟೋರೋಲಾ, ಬುಹು ನಿರೀಕ್ಷಿತ ಮೋಟೊ ಜಿ-4 ಆವೃತ್ತಿಯ ಸ್ಮಾರ್ಟ್ಪೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಆವೃತ್ತಿಯ ಸ್ಮಾರ್ಟ್ಪೋನ್ಗಳು ಗ್ರಾಹಕರಿಗೆ 12,499 ರೂಪಾಯಿ ಬೆಲೆಯಲ್ಲಿ ಅಮೆಜಾನ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಮೋಟೊ ಜಿ-4 ಆವೃತ್ತಿಯ ಸ್ಮಾರ್ಟ್ಪೋನ್ಗಳ ವೈಶಿಷ್ಟ್ಯಗಳು
ಮೋಟೊ ಜಿ-4 ಆವೃತ್ತಿಯ ಸ್ಮಾರ್ಟ್ಪೋನ್ಗಳು ಗೊರಿಲ್ಲಾ ಗ್ಲಾಸ್ ಮತ್ತು 401ಪಿಪಿಐ ಜೊತೆಗೆ 5.5 ಇಂಚ್ ಎಚ್ಡಿ ಡಿಸ್ಪ್ಲೇ ಹೊಂದಿದೆ.
ಸ್ಫೋರ್ಟ್ಸ್ 1.5ಜಿಎಚ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 617 ಪ್ರೊಸೆಸರ್, ಆಂಯಡ್ರಿನೋ 405 ಜಿಪಿಯು, 3000 ಎಮ್ಎಎಚ್ ಸಾಮರ್ಥ್ಯದ ಬ್ಯಾಟರಿ
13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು ಫ್ಲ್ಯಾಶ್ ಜೊತೆಗೆ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.
ಮೋಟೊ ಜಿ-4 ಪ್ಲಸ್ ಆವೃತ್ತಿಯಂತೆ ಫಿಂಗರ್ಪ್ರಿಂಟ್ ಸೆಂಸಾರ್ ಮತ್ತು ಲೇಸರ್ ಆಟೋಫೋಕಸ್ ವೈಶಿಷ್ಟ್ಯ ಹೊಂದಿದೆ.
ಈ ಆವೃತ್ತಿಯ ಪೋನ್ಗಳು ಕೇವಲ 2 ಜಿಬಿ ರ್ಯಾಮ್ ಜೊತೆಗೆ 16 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.
ಆಂಡ್ರಾಯ್ಡ್ 6.0.1 ಮಾರ್ಷ್ಮ್ಯಾಲೋ ವೈಶಿಷ್ಟ್ಯದ ಜೊತೆಗೆ ವಿವೊಎಲ್ಟಿಇ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.
ಡ್ಯುಯಲ್ ಸಿಮ್ ಕಾರ್ಡ್ ಸೌಲಭ್ಯದೊಂದಿಗೆ ಡ್ಯುಯಲ್ ಸ್ಟಾಂಡ್ಬೈ ಮತ್ತು 3ಜಿ, 4ಜಿ ಸಂಪರ್ಕ ಒಳಗೊಂಡಿದೆ.
ಈ ಆವೃತ್ತಿಯ ಪೋನ್ಗಳು ಆಟೋ ಎಚ್ಡಿಆರ್, ಪಾನೊರಮಾದಂತಹ ಅತ್ಯುತ್ತಮ ಕ್ಯಾಮೆರಾ ವೈಶಿಷ್ಟ್ಯವನ್ನು ಹೊಂದಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.