ಈಗ ಮುಕೇಶ್ ಅಂಬಾನಿ ಅತೀ ದೊಡ್ಡ ಶ್ರೀಮಂತರಲ್ಲ, ದಿಲೀಪ್ ಶಾಂಘ್ವಿ

ಗುರುವಾರ, 5 ಮಾರ್ಚ್ 2015 (15:39 IST)
ಈಗ ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ಬಿಲಿಯಾಧಿಪತಿಯಾಗಿ ಉಳಿದಿಲ್ಲ. ಕಳೆದ  8ವರ್ಷಗಳಿಂದ ಅತೀ ಶ್ರೀಮಂತ ಭಾರತದ ಉದ್ಯಮಿಯಾಗಿ ಆಕ್ರಮಿಸಿಕೊಂಡಿದ್ದ ಮುಖೇಶ್ ಅಂಬಾನಿ ಸ್ಥಾನಕ್ಕೆ ಚ್ಯುತಿ ಉಂಟಾಗಿದ್ದು, ಸನ್ ಫಾರ್ಮಾ  ಔಷಧ ತಯಾರಿಕೆ ಸಂಸ್ಥೆಯ ಸಂಸ್ಥಾಪಕ ದಿಲೀಪ್ ಶಾಂಘ್ವಿ ಈ ಈ ಸ್ಥಾನ ಅಲಂಕರಿಸಿಕೊಂಡಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯಾಧಿಪತಿ ಸೂಚ್ಯಂಕ ಕೂಡ ಶಾಂಘ್ವಿ ಅಂಬಾನಿಗಿಂತ ಮುಂದಿದ್ದಾರೆಂದು ತಿಳಿಸಿದೆ.ಪೋರ್ಬ್ಸ್‌ನ ದತ್ತಾಂಶದ ಪ್ರಕಾರ, ಶಾಂಘ್ವಿಯವರ ನಿವ್ವಳ ಆಸ್ತಿ ಮೌಲ್ಯ 21. 5 ದಶಲಕ್ಷ ಡಾಲರ್‌ಗಳಾಗಿದ್ದು, ಅಂಬಾನಿಯವರ  20.4 ದಶಲಕ್ಷ ಡಾಲರ್‌ಗಿಂತ  1.1 ದಶಲಕ್ಷ ಡಾಲರ್ ಹೆಚ್ಚಾಗಿದೆ. ಶಾಂಘ್ವಿ ಸ್ವಂತ ಶ್ರಮದಿಂದ ಈ ಉದ್ಯಮವನ್ನು ಸ್ಥಾಪಿಸಿದ್ದರೆ, ಅಂಬಾನಿ ತಮ್ಮ ತಂದೆ ಧೀರುಬಾಯಿ ಅಂಬಾನಿಯ ಉದ್ಯಮವನ್ನು  ಆನುವಂಶಿಕವಾಗಿ ಪಡೆದಿದ್ದಾರೆ. 
 
ಶಾಂಘ್ವಿ ಈ ವರ್ಷದ ಮೊದಲ ಎರಡು ತಿಂಗಳಲ್ಲಿ ತಮ್ಮ ಆಸ್ತಿ ಮೌಲ್ಯಕ್ಕೆ ಕೋಟ್ಯಂತರ ರೂ.ಗಳನ್ನು ಸೇರ್ಪಡೆ ಮಾಡಿದ್ದಾರೆ. ಈ ವರ್ಷ ಅವರ ಆಸ್ತಿ 4.5 ಶತಕೋಟಿ ಡಾಲರ್ ವರ್ಧಿಸಿದೆ. ಶಾಂಘ್ವಿಯ ಆಸ್ತಿ ಮೌಲ್ಯದಲ್ಲಿ ಶೀಘ್ರ ಏರಿಕೆಗೆ ಸನ್ ಫಾರ್ಮಾ ಕಂಪನಿಯ ಚೇತೋಹಾರಿ ಸಾಧನೆ ಕಾರಣವಾಗಿದೆ. ಕಳೆದ ಮೂರು ತಿಂಗಳಲ್ಲಿ ಸನ್ ಫಾರ್ಮಾ ಷೇರುಗಳು ಶೇ. 22 ರಷ್ಟು ಏರಿಕೆಯಾಗಿದ್ದರೆ ರಿಲಯನ್ಸ್ ಷೇರುಗಳು ಎಎಶೇ. 7.5 ಕುಸಿತ ಕಂಡಿದೆ.

ವೆಬ್ದುನಿಯಾವನ್ನು ಓದಿ