ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನ ಉಳಿಸಿಕೊಂಡ ಮುಕೇಶ್ ಅಂಬಾನಿ

ಗುರುವಾರ, 3 ಮಾರ್ಚ್ 2016 (11:35 IST)
84 ಬಿಲಿಯನೇರ್‌ಗಳಿರುವ ಭಾರತದಲ್ಲಿ, ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವುದಾಗಿ ಫೋರ್ಬ್ಸ್ ವಾರ್ಷಿಕ ಪಟ್ಟಿಯಲ್ಲಿ ಪ್ರಕಟಿಸಿದೆ  
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಿಲ್ ಗೆಟ್ಸ್ 75 ಬಿಲಿಯನ್ ಡಾಲರ್ ಸಂಪತ್ತು ಹೊಂದುವ ಮೂಲಕ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ.
 
ಕಳೆದ ವರ್ಷದ ಪೋರ್ಬ್ಸ್ ಪಟ್ಟಿಯ ಪ್ರಕಾರ, ವಿಶ್ವದ ಶ್ರೀಮಂತರ ಸಾಲಿನಲ್ಲಿ 1826 ಬಿಲಿಯನರ್‌ಗಳಿದ್ದು, ಪ್ರಸಕ್ತ ಆರ್ಥಿಕ ವರ್ಷದ ವಿಶ್ವದ ಶ್ರೀಮಂತರ ಸಂಖ್ಯೆ 1810ಕ್ಕೆ ಕುಸಿದಿದೆ. ಇವರ ಒಟ್ಟು ನಿವ್ವಳ ಆದಾಯ 6.5 ಬಿಲಿಯನ್ ಆಗಿದ್ದು, ಪ್ರಸಕ್ತ ವರ್ಷದಲ್ಲಿ 570 ಮಿಲಿಯನ್‌ನಷ್ಟು ಆದಾಯದಲ್ಲಿ ಕುಸಿತ ಕಂಡಿದೆ.
 
ಕಳೆದ ವರ್ಷದ ಆದಾಯಕ್ಕೆ ಹೋಲಿಸಿದಲ್ಲಿ 4.2 ಬಿಲಿಯನ್ ಡಾಲರ್ ಆದಾಯ ಖೋತಾದ ಹೊರತಾಗಿಯೂ 75 ಬಿಲಿಯನ್ ಡಾಲರ್ ಸಂಪತ್ತು ಹೊಂದುವ ಮೂಲಕ, ಕಳೆದ ಮೂರು ವರ್ಷಗಳಿಂದ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಬಿಲ್ ಗೆಟ್ಸ್ ಅಗ್ರಸ್ಥಾನ ಪಡೆದಿದ್ದಾರೆ. 22 ವರ್ಷಗಳ ಅವಧಿಯಲ್ಲಿ ಗೇಟ್ಸ್ 17 ಬಾರಿ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
 
ರಿಲಯನ್ಸ್ ಸಂಸ್ಥೆಯ ಮಾಲೀಕರಾದ ಮುಕೇಶ್ ಅಂಬಾನಿ, ತೈಲ ಹಾಗೂ ಅನಿಲ ಷೇರು ಮೌಲ್ಯಗಳಲ್ಲಿ ಕಂಡ ಕುಸಿತದ ಹೊರತಾಗಿಯೂ, ಭಾರತದ ಶೀಮಂತರ ಸಾಲಿನಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆಂದು ಪೋರ್ಬ್ಸ್ ತಿಳಿಸಿದೆ.

ವೆಬ್ದುನಿಯಾವನ್ನು ಓದಿ