ವಲಸೆ ಏಜಂಟರಂತೆ ಐಟಿ ಕಂಪನಿಗಳ ವರ್ತನೆ: ನಾರಾಯಣ ಮೂರ್ತಿ

ಬುಧವಾರ, 6 ಏಪ್ರಿಲ್ 2016 (19:51 IST)
ಅಮೆರಿಕದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಿಲುವಿಗೆ ಇನ್ಫೋಸಿಸ್ ಎನ್.ಆರ್. ನಾರಾಯಣ ಮೂರ್ತಿ ಬೆಂಬಲವಾಗಿ ನಿಂತಿದ್ದಾರೆ. ಭಾರತ ಮತ್ತು ಚೀನಾಗೆ ಅಮೆರಿಕದ ಉದ್ಯೋಗಗಳ ಹೊರಗುತ್ತಿಗೆ ಕುರಿತು ತೀವ್ರ ವಿರೋಧ ಸೂಚಿಸಿದ ಟ್ರಂಪ್‌ ಜತೆ ಮೂರ್ತಿ ಧ್ವನಿಗೂಡಿಸಿದ್ದಾರೆ.
 
ಮೂರ್ತಿ ಮಂಗಳವಾರ ಈ ಕುರಿತು ಮಾತನಾಡುತ್ತಾ, ಭಾರತದ ಸಾಫ್ಟ್‌ವೇರ್ ಉದ್ಯಮವು ತನ್ನ ನೌಕರರಿಗೆ ವಲಸೆ ಏಜಂಟರಂತೆ ವರ್ತಿಸುತ್ತಿದೆ ಎಂದು ಹೇಳಿದ್ದರು. ಐಟಿ ಕಂಪನಿಗಳಿಗೆ ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸುವುದು ಕಡ್ಡಾಯವಾಗಿದ್ದು, ಅದು ಅವರ ಜವಾಬ್ದಾರಿ ಕೂಡ ಎಂದು ಮೂರ್ತಿ ಹೇಳಿದರು. 
 
ಎಲ್ಲಾ ಭಾರತೀಯ ಕಂಪನಿಗಳು ವೀಸಾ ಮತ್ತು ಗ್ರೀನ್ ಕಾರ್ಡ್ ಖಾತರಿ ನೀಡುತ್ತವೆ. ಇಡೀ ಪ್ರಕ್ರಿಯೆಯು ಅವು ವಲಸೆ ಏಜಂಟರ ರೀತಿಯಲ್ಲಿದೆ. ಭಾರತೀಯ ಕಂಪನಿಗಳು ತಮ್ಮ ನೌಕರರನ್ನು  ಅಂಟ್ಲಾಂಟಿಕ್ ಸಾಗರ ದಾಟಿಸುವ ಏಜಂಟರ ರೀತಿಯಲ್ಲಿ ವರ್ತಿಸುತ್ತಿವೆ ಎಂದು ಮೂರ್ತಿ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ಹೇಳಿದರು. 

ವೆಬ್ದುನಿಯಾವನ್ನು ಓದಿ