ನಾವು ಜಗತ್ತನ್ನು ಮೊಬೈಲ್ ಫೋನ್‌ನೊಳಗೆ ತರೋಣ: ಮೋದಿ

ಶನಿವಾರ, 31 ಜನವರಿ 2015 (12:57 IST)
ಎಂ ಆಡಳಿತಕ್ಕೆ ಚೇತರಿಕೆ ನೀಡಲು ಮೊಬೈಲ್ ಫೋನ್‌ಗಳ ಮೂಲಕ ಅನೇಕ ಸೇವೆಗಳನ್ನು ನೀಡುವ ವಿಧಾನವನ್ನು ಶೋಧಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಐಟಿ ತಜ್ಞರಿಗೆ ಕರೆ ನೀಡಿದ್ದಾರೆ.

ತಮ್ಮ ಡಿಜಿಟಲ್ ಭಾರತ ಯೋಜನೆಯಲ್ಲಿ ಇ-ಆಡಳಿತ ಅವಶ್ಯಕ ಭಾಗ ಎಂದು ಹೇಳಿದ ಅವರು, ಭಾರತದ ಅಭಿವೃದ್ಧಿ ಯಾತ್ರೆಯ ವೇಗ ಮತ್ತು ಪ್ರಮಾಣಕ್ಕೆ ಇತ್ತೀಚಿನ ತಂತ್ರಜ್ಞಾನದ ಗರಿಷ್ಠ ಮತ್ತು ಬುದ್ಧಿವಂತಿಕೆಯ ಬಳಕೆಗೆ ಒತ್ತು ನೀಡಿದರು. ಮೊಬೈಲ್ ಮೂಲಕ ಸಾಧ್ಯವಾದಷ್ಟು ಸೇವೆಗಳನ್ನು ನೀಡುವ ಮಾರ್ಗಗಳನ್ನು ಶೋಧಿಸಿ, ನಮ್ಮ ಮೊಬೈಲ್ ಫೋನ್‌ನೊಳಗೆ ಜಗತ್ತನ್ನು ತರೋಣ ಎಂದು ಮೋದಿ ಹೇಳಿದರು.

ಟ್ವಿಟರ್ ಮೂಲಕ ಇ-ಆಡಳಿತದ 18 ನೇ ರಾಷ್ಟ್ರೀಯ ಸಮಾವೇಶದಲ್ಲಿ ಮೋದಿ ಮಾತನಾಡುತ್ತಿದ್ದರು. ಅತೀ ದೊಡ್ಡ ತಜ್ಞರ ಸಮೂಹವನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೈಕ್ರೋ ಬ್ಲಾಗಿಂಗ್ ಸೈಟ್ ಬಳಸಿದ್ದು ಇದೇ ಮೊದಲು. ಮೋದಿಯವರ ಟ್ವೀಟ್‌ಗಳ ಸರಣಿಯನ್ನು ಮಹಾತ್ಮ ಗಾಂಧಿ ಮಂದಿರದ ದೊಡ್ಡ ಪರದೆಯ ಮೇಲೆ ತೋರಿಸಲಾಯಿತು.

ನಾವು ಇ-ಆಡಳಿತದತ್ತ ನೋಟ ಹರಿಸುವ ಸಂದರ್ಭದಲ್ಲಿ ಮೊಬೈಲ್ ಸೇವೆಯ ಬಗ್ಗೆ ಮೊದಲು ಯೋಚಿಸುವ ಮೂಲಕ ಎಂ-ಆಡಳಿತಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದು ಟ್ವೀಟ್ ಮಾಡಿದರು.

ವೆಬ್ದುನಿಯಾವನ್ನು ಓದಿ