ಮ್ಯಾಗಿ ನಿಷೇಧದಿಂದ ನೆಸ್ಲೆ ಇಂಡಿಯಾ ಕಂಪನಿಗೆ 64.4 ಕೋಟಿ ನಷ್ಟ

ಬುಧವಾರ, 29 ಜುಲೈ 2015 (20:42 IST)
ನೆಸ್ಲೆ ಇಂಡಿಯಾ ಸಂಸ್ಥೆಯು ಎರಡನೇ ತ್ರೈಮಾಸಿಕದಲ್ಲಿ ಪುನಃ ನಷ್ಟ ಅನುಭವಿಸಿದ್ದು, ಮ್ಯಾಗಿ ನೂಡಲ್ಸ್ ಪೊಟ್ಟಣಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆದ ಬಳಿಕ ಇತರೆ ಉತ್ಪನ್ನಗಳ ಮಾರಾಟ ಕುಸಿದಿವೆ.

ಸ್ವಿಸ್ ಆಹಾರ ದೈತ್ಯ ನೆಸ್ಲೆ  ಈ ತ್ರೈಮಾಸಿಕದಲ್ಲಿ 64.4 ಕೋಟಿ ನಷ್ಟ ಅನುಭವಿಸಿದ್ದು, ಹಿಂದಿನ ವರ್ಷ 288 ಕೋಟಿ ಲಾಭ ಗಳಿಸಿತ್ತು. 
 ಮ್ಯಾಗಿ ನೂಡಲ್ಸ್ ಪುನಃ ಮಾರಾಟಕ್ಕೆ ತರಲು ನೆಸ್ಲೆ ಇಂಡಿಯಾ ಎಲ್ಲಾ ಪ್ರಯತ್ನ ಮಾಡುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿರುವ ಸುರೇಶ್ ನಾರಾಯಣ್ ಹೇಳಿದ್ದಾರೆ. 
 
 ಮ್ಯಾಗಿ ನೂಡಲ್ಸ್‌ನಲ್ಲಿ ಅಪಾಯಕಾರಿ ಮಟ್ಟದ ಸೀಸದ ಅಂಶವಿದೆಯೆಂದು ವರದಿ ಬಂದ ಬಳಿಕ ನೆಸ್ಲೆ ಕಂಪನಿಯು ನಷ್ಟದ ಹಾದಿಯಲ್ಲಿದ್ದು, ಎಟಿನೆ ಬೆನೆಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ಇಳಿದಿದ್ದರು. 
 
 ಮ್ಯಾಗಿ ಸುರಕ್ಷಿತ ಎಂದು ನೆಸ್ಲೆ ಕೋರ್ಟ್‌ನಲ್ಲಿ ಅಪೀಲು ಸಲ್ಲಿಸಿದ್ದು, ತೀರ್ಪು ಬರುವ ತನಕ 27,400 ಟನ್ ನೂಡಲ್ಸ್ ರಾಷ್ಟ್ರವ್ಯಾಪಿ ಹಿಂದಕ್ಕೆ ಪಡೆದಿದೆ. 
 

ವೆಬ್ದುನಿಯಾವನ್ನು ಓದಿ