ಮ್ಯಾಗಿ ಪೊಟ್ಟಣಗಳ ನಾಶಕ್ಕೆ ಅಂಬುಜಾ ಸಿಮೆಂಟ್ಸ್‌ಗೆ 20 ಕೋಟಿ ರೂ. ಪಾವತಿ

ಮಂಗಳವಾರ, 7 ಜುಲೈ 2015 (13:32 IST)
ನೆಸ್ಲೆ ಇಂಡಿಯಾ ಅಂಬುಜಾ ಸಿಮೆಂಟ್ಸ್‌ಗೆ ಅದರ ಸಿಮೆಂಟ್ ಘಟಕಗಳಲ್ಲಿ ಮ್ಯಾಗಿ ನೂಡಲ್ಸ್ ನಾಶ ಮಾಡುವುದಕ್ಕೆ 20 ಕೋಟಿ ರೂ.ಗಳನ್ನು ನೀಡಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರವು ಮ್ಯಾಗಿ ನೂಡಲ್ಸ್ ಅಸುರಕ್ಷಿತ ಮತ್ತು ಅಪಾಯಕಾರಿ ಎಂದು ಪರಿಗಣಿಸಿ ದೇಶದಲ್ಲಿ ನಿಷೇಧ ವಿಧಿಸಲಾಗಿದೆ.

ಮಹಾರಾಷ್ಟ್ರದ ಚಂದ್ರಾಪುರದಲ್ಲಿನ ಸಿಮೆಂಟ್ ಘಟಕದಲ್ಲಿ ಮ್ಯಾಗಿ ನೂಡಲ್ಸ್ ಪೊಟ್ಟಣಗಳನ್ನು ಸುಡುವುದಕ್ಕಾಗಿ ಅಂಬುಜಾ ಸಿಮೆಂಟ್ಸ್‌ಗೆ 20 ಕೋಟಿ ರೂ.ಗಳನ್ನು ನೀಡಲಾಗಿದೆಯೆಂದು ನಂಬಲಾಗಿದೆ.
 
ಈ ವಿವಾದದಿಂದಾಗಿ ಮತ್ತು ಮ್ಯಾಗಿನೂಡಲ್ಸ್ ನಿಷೇಧದಿಂದಾಗಿ ನೆಸ್ಲೆ ಬ್ರಾಂಡ್ ಮೌಲ್ಯದಿಂದ 200 ದಶಲಕ್ಷ ಡಾಲರ್ ಅಥವಾ 1300 ಕೋಟಿ ರೂ. ನಿರ್ಮೂಲನೆಯಾಗಿದೆ ಎಂದು ಬ್ರಾಂಡ್ ಫೈನಾನ್ಸ್ ತಿಳಿಸಿದೆ. 
 
ಮ್ಯಾಗಿಯನ್ನು ದೇಶಾದ್ಯಂತ ತಪಾಸಣೆ ನಡೆಸಿದಾಗ ಅಧಿಕ ಪ್ರಮಾಣದಲ್ಲಿ ಮೊನೊಸೋಡಿಯಂ ಗ್ಲುಟಮೇಟ್(ರುಚಿ ವರ್ಧಕ) ಮತ್ತು ಸೀಸ ಇದ್ದಿದ್ದರಿಂದ ಜೂನ್ 5ರಿಂದ ಮ್ಯಾಗಿ ನೂಡಲ್ಸ್ ಎಲ್ಲಾ ವೈವಿಧ್ಯಗಳನ್ನು ಹಿಂತೆಗೆದುಕೊಳ್ಳಲಾಗಿದೆ.  ನೂಡಲ್ಸ್ ಸುರಕ್ಷಿತವಾಗಿದೆ ಎಂದು ನೆಸ್ಲೆ ಈಗಲೂ ಪ್ರತಿಪಾದಿಸುತ್ತಿದ್ದು, ಮುಂಬೈ ಹೈಕೋರ್ಟ್‌ನಲ್ಲಿ ಮ್ಯಾಗಿ ನಿಷೇಧವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ. 

ವೆಬ್ದುನಿಯಾವನ್ನು ಓದಿ