ಹೊಸ ಮಾರುತಿ ಆಲ್ಟೋ 800ನಲ್ಲಿ ಟಚ್‌ಸ್ಕ್ರೀನ್ ಪರದೆ

ಬುಧವಾರ, 8 ಮಾರ್ಚ್ 2017 (13:17 IST)
ಭದ್ರತೆಗೆ ಹೆಚ್ಚು ಒತ್ತು ನೀಡುತ್ತಾ ಹೊಸ ಫೀಚರ್‌ಗಳೊಂದಿಗೆ ಬರುತ್ತಿರುವ ಹ್ಯಾಚ್ ಬ್ಯಾಕ್ ವಿಭಾಗದ ಕಾರುಗಳು ಗ್ರಾಹಕರನ್ನು ಸೆಳೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇಗ್ನಿಸ್, ಬಲೆನೋ, ವಿಟಾರಾ ಬ್ರೀಜಾ ಕಾರುಗಳನ್ನು ಬಿಡುಗಡೆ ಮಾಡಿದ ದೇಶೀಯ ಆಟೋ ದಿಗ್ಗಜ ಮಾರುತಿ ಸುಜುಕಿ ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ಮೇಲೆ ಹೆಚ್ಚಿನ ಗಮನಹರಿಸಿದೆ.
 
ಪ್ರತಿಸ್ಪರ್ಧಿ ಕಂಪೆನಿಗಳಿಗೆ ಸ್ಪರ್ಧೆ ನೀಡಲು ಭದ್ರತೆ, ಹೆಚ್ಚಿನ ಫೀಚರ್‌ಗಳೊಂದಿಗೆ ಹೊಸ ಆಲ್ಟೋ 800ನ್ನು ಲಾಂಚ್ ಮಾಡಲು ಸಿದ್ಧವಾಗಿದೆ. 2018 ಆಟೋ ಎಕ್ಸ್‌ಪೋದಲ್ಲಿ ಈ ಹೊಸ ಮಾರುತಿ ಸುಜುಕಿ ಆಲ್ಟೋ 800ನ್ನು ಪ್ರದರ್ಶಿಸಲಾಗುತ್ತಿದೆ. ಇಗ್ನಿಸ್, ಬಲೆನೋ ತರಹ ಹೊಸ ಜನರೇಷನ್ ಆಲ್ಟೋದಲ್ಲಿ ಟಚ್ ಸ್ಕ್ರೀನ್ ಸಿಸ್ಟಂ ಇರಲಿದೆ ಎನ್ನುತ್ತಿವೆ ಮೂಲಗಳು.
 
ಎಬಿಎಸ್, ಡ್ಯುಯಲ್ ಏರ್ ಬ್ಯಾಗ್ಸ್ ಸಹ ನೀಡಲಾಗುತ್ತಿದೆ. ತಮ್ಮ ಮಾಡೆಲ್ ಕಾರು ತಯಾರಿ ಈಗಿನ ಟ್ರೆಂಡನ್ನೇ ಬದಲಾಯಿಸಲಿದೆ ಎಂದು ಕಂಪೆನಿ ವಿಶ್ವಾಸ ವ್ಯಕ್ತಪಡಿಸಿದೆ. ರೆನಾಲ್ಟ್ ಕ್ವಿಡ್, ಡಾಟ್ಸನ್ ರೆಡಿಗೋ ನಂತಹ ಕಂಪೆನಿಗಳಿಂದ ಮಾರುತಿ ಸುಜುಕಿ ಆಲ್ಟೋ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ.   
 
ಇದುವರೆಗೂ ಆಲ್ಟೋ ಮಾಡೆಲ್ ಮೋಸ್ಟ್ ಸಕ್ಸಸ್‌ಫುಲ್ ಉತ್ಪನ್ನ ಎನ್ನಿಸಿಕೊಂಡಿದೆ. ಫೆಬ್ರವರಿ ಮಾರಾಟದಲ್ಲೂ ಇದೇ ಟಾಪ್ ಸ್ಥಾನದಲ್ಲಿದೆ. ಜನವರಿ ತಿಂಗಳಲ್ಲೂ ಬೆಸ್ಟ್ ಸೆಲ್ಲಿಂಗ್ ಟ್ಯಾಗನ್ನು ಮಾರುತಿ ಆಲ್ಟೋ ಪಡೆದಿದೆ ಎಂದು ಸಿಯಾಮ್ ವರದಿ ಹೇಳುತ್ತಿದೆ. ಜನವರಿಯಲ್ಲಿ 22,998 ಕಾರುಗಳು ಮಾರಾಟವಾಗಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ