ಮೋದಿ ಸರ್ಕಾರದಿಂದ ಯಾವುದೇ '' ಬಿಗ್ ಬ್ಯಾಂಗ್'' ಹೂಡಿಕೆಯಿಲ್ಲ

ಸೋಮವಾರ, 25 ಮೇ 2015 (15:52 IST)
ನರೇಂದ್ರ ಮೋದಿ ಸರ್ಕಾರದ ಒಂದು ವರ್ಷ ಪೂರೈಸಿದ ಸಂದರ್ಭವನ್ನು ಆಚರಣೆ ಮಾಡುತ್ತಿರುವ ನಡುವೆ, ಕೈಗಾರಿಕೆ ಸಂಸ್ಥೆ ಸಿಐಐ ಮೊದಲ ವರ್ಷದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯ (ಬಿಗ್ ಬ್ಯಾಂಗ್) ಹೂಡಿಕೆಯಾಗಿಲ್ಲ. ಉದ್ಯಮ ನಿರ್ವಹಣೆ ಸುಲಭಗೊಳಿಸುವ ವಿಷಯಗಳನ್ನು ನಿಭಾಯಿಸಬೇಕಾಗಿದೆ ಎಂದು ಹೇಳಿದರು. 
 
ಬಂಡವಾಳ ಹೂಡಿಕೆಗಳು ಕ್ರಮೇಣ ಬರುತ್ತದೆಂದು ಹೇಳಿದ ಸಿಐಐ ಅಧ್ಯಕ್ಷ ಸುಮಿತ್ ಮಜುಮ್‌ದಾರ್, ವಿಶ್ವಬ್ಯಾಂಕ್‌ನ ಉದ್ಯಮ ನಿರ್ವಹಣೆ ಸುಲಭಗೊಳಿಸುವ ಸೂಚ್ಯಂಕದಲ್ಲಿ ದೇಶದ ಶ್ರೇಯಾಂಕವನ್ನು 50 ತಂದಿರುವ ಸರ್ಕಾರದ ಗುರಿಯನ್ನು ಮಹತ್ವಾಕಾಂಕ್ಷೆ ಎಂದು ನುಡಿದರು. 
 
ಮೋದಿ ಸರ್ಕಾರದ ಒಂದು ವರ್ಷದ ಸಾಧನೆ ಕುರಿತು ಸಂದರ್ಶನದಲ್ಲಿ ಮಾತನಾಡುತ್ತಿದ್ದ ಮಂಜುಂದಾರ್,ಯಾವುದೇ ಬಿಗ್ ಬ್ಯಾಂಗ್ ಹೂಡಿಕೆ ಮಾಡಲಾಗಿಲ್ಲ. ಆದರೆ ಅದು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
 
ಸರ್ಕಾರವು ನಿಧಾನ ಮತ್ತು ಕ್ರಮೇಣ ಬೆಳವಣಿಗೆ ಸಾಧಿಸುತ್ತದೆಂದು ಭಾವಿಸಿದ್ದೇನೆ. ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆಂದು ಹೇಳುವುದು ಕಷ್ಟ. ವಿವಿಧ ಜನರ ನಡುವೆ ನಡೆಸಿದ ಚರ್ಚೆಯ ಆಧಾರದ ಮೇಲೆ ಈ ವರ್ಷದ ಮೂರನೇ ಅಥವಾ ನಾಲ್ಕನೇ ತ್ರೈಮಾಸಿಕದಲ್ಲಿ ನಾವು ಇದರ ಫಲಿತಾಂಶ ಕಾಣುವುದಕ್ಕೆ ಸಾಧ್ಯ ಎಂದು ಹೇಳಿದರು. 
 

ವೆಬ್ದುನಿಯಾವನ್ನು ಓದಿ