2015-16ರ ಬಜೆಟ್: ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ಶನಿವಾರ, 28 ಫೆಬ್ರವರಿ 2015 (12:22 IST)
ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸುವ ಮೂಲಕ ಆದಾಯ ತೆರಿಗೆಯಲ್ಲಿ ವಿನಾಯಿತಿ ನಿರೀಕ್ಷಿಸಿದ್ದ ವೇತನದಾರರ  ವರ್ಗಕ್ಕೆ  ನಿರಾಶೆಯಾಗಿದೆ. ಹಿಂದಿನ ಸಾಲಿನಂತೆ  2.5 ಲಕ್ಷದವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ. 2.5ರಿಂದ 5 ಲಕ್ಷ ಆದಾಯಕ್ಕೆ ಶೇ. 10,  5ರಿಂದ 10ಲಕ್ಷಕ್ಕೆ ಶೇ. 20 ಮತ್ತು 10 ಲಕ್ಷ ಮೇಲ್ಪಟ್ಟು ಶೇ. 30 ಆದಾಯ ತೆರಿಗೆಯನ್ನೇ ಉಳಿಸಿಕೊಳ್ಳಲಾಗಿದೆ. 
 
ಶೇ. 30ರಿಂದ 25ಕ್ಕೆ ಕಾರ್ಪೊರೇಟ್ ಟ್ಯಾಕ್ಸ್ ಇಳಿಕೆ. ಮುಂದಿನ ನಾಲ್ಕು ವರ್ಷಗಳಲ್ಲಿ ಶೇ. 30ರಿಂದ 25ಕ್ಕೆ ಇಳಿಕೆ. ಕಪ್ಪು ಹಣಕ್ಕೆ ಕಡಿವಾಣ ಹಾಕಲಾಗುತ್ತದೆ. ಕಪ್ಪು ಹಣ ನಿಯಂತ್ರಣಕ್ಕೆ ಈ ಅಧಿವೇಶನದಲ್ಲಿ ಹೊಸ ಮಸೂದೆ ಮಂಡನೆ ಮಾಡಲಾಗುತ್ತದೆ ಎಂದು ಅರುಣ್ ಜೇಟ್ಲಿ ಬಜೆಟ್ ಮಂಡಿಸುತ್ತಾ ಹೇಳಿದರು.

ಮುಂದಿನ ಆರ್ಥಿಕ ವರ್ಷದಿಂದ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿ ಮಾಡಲಾಗುತ್ತದೆ ಎಂದು ಜೇಟ್ಲಿ ಹೇಳಿದರು. ತೆರಿಗೆ ಕಳ್ಳರಿಗೆ 10 ವರ್ಷ ಜೈಲು ಶಿಕ್ಷೆ, ಐಟಿ ರಿಟರ್ನ್ಸ್ ದಾಖಲಿಸದಿದ್ದರೆ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಜೇಟ್ಲಿ ಹೇಳಿದರು. ಒಂದು ಕೋಟಿ ಗಿಂತ ಹೆಚ್ಚಿನ ಆದಾಯವಿರುವವರಿಗೆ ಶೇ. 2ರಷ್ಟು ಹೆಚ್ಚುವರಿ ಸರ್ಚಾರ್ಜ್ ವಿಧಿಸಲಾಗುತ್ತದೆ. 

ವೆಬ್ದುನಿಯಾವನ್ನು ಓದಿ