ಬ್ಯಾಂಕ್‌ ಖಾತೆ ತೆಗೆಯಲು ರೇಶನ್‌ ಕಾರ್ಡ್ ಬೇಕಿಲ್ಲ

ಗುರುವಾರ, 24 ಜುಲೈ 2014 (17:50 IST)
ಬ್ಯಾಂಕ್‌ ಆಕೌಂಟ್‌ ತೆಗೆಯುವವರಿಗೆ ರೇಶನ್‌ ಕಾರ್ಡ್ ಮಾನ್ಯವಾಗುವುದಿಲ್ಲ, ಇದರ ಬದಲ ಆಧಾರ ಕಾರ್ಡ್ ಬಳಸಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. 
 
ಜುಲೈ 19ರಂದು ಸಂಶೋಧಿತ ಕೆವಾಯಿಸಿ ಗೈಡ್‌ಲೈನ್ಸ್‌‌ನಲ್ಲಿ ಆರ್‌‌‌ಬಿಐ ಬ್ಯಾಂಕ್ ಅಕೌಂಟ್‌‌ ತೆರೆಯಲು ಆರು ದಾಖಲೆಗಳನ್ನು ತಿಳಿಸಿದೆ. ಆಧಾರ ಕಾರ್ಡ್, ವೋಟರ್‌‌ ಐಡಿ , ಪ್ಯಾನ್‌ ಕಾರ್ಡ್‌ , ಡ್ರೈವಿಂಗ್‌ ಲೈಸನ್ಸ್‌ ಮತ್ತು ಉದ್ಯೋಗ ಖಾತ್ರಿ ಯೋಜನೆ ಕಾರ್ಡ್ ಬ್ಯಾಂಕ್‌ ಅಕೌಂಟ್‌ ತರೆಯಲು ಬಳಸಬಹುದಾಗಿದೆ.
 
ರೇಶನ್‌ ಕಾರ್ಡ್‌ ಸಬ್ಸಿಡಿಯಿಂದ ಸಿಗುವ ರೇಶನ್‌‌‌ ವಸ್ತುಗಳನ್ನು ಪಡೆಯಲು ಬಳಸಲಾಗುತ್ತದೆ. ಇದು ಬ್ಯಾಂಕ್ ಅಕೌಂಟ್‌ ತೆರೆಯಲು ಮತ್ತು ಗುರುತಿನ ಪತ್ರವನ್ನಾಗಿ ಬಳಸಲಾಗುತ್ತಿದೆ. ಆದರೆ ರಿಸರ್ವ್‌ ಬ್ಯಾಂಕ್‌‌ನ ಗೈಡಲೈನ್ಸ್‌ ‌‌ನಿಯಮದ ಪ್ರಕಾರ ರೇಶನ್‌‌ ಕಾರ್ಡ್‌ ಬ್ಯಾಂಕ್‌ ಅಕೌಂಟ್‌‌‌ಗೆ ಬಳಕೆಯಾಗುವುದಿಲ್ಲ. 
 
ಇಲ್ಲಿಯವರೆಗೆ ಬ್ಯಾಂಕ್‌ ಅಕೌಂಟ್‌ ತೆರೆಯಲು ಗ್ರಾಹಕರಿಂದ ಕೆಲವು ದಾಖಲೆಗಳು ಪಡೆಯಲಾಗುತ್ತಿತ್ತು ಇದರಲ್ಲಿ ರೇಶನ್ ಕಾಡ್‌ ಮತ್ತು ಎಲೆಕ್ಟ್ರಿಸಿಟಿ ಬಿಲ್‌ ಕೂಡ ಇತ್ತು. ಆದರೆ ಹೊಸ ನಿಯಮದಿಂದ ಇವುಗಳ ಅವಶ್ಯಕತೆ ಇರುವುದಿಲ್ಲ. 
 

ವೆಬ್ದುನಿಯಾವನ್ನು ಓದಿ